ಧ್ವನಿವರ್ಧಕದಲ್ಲಿ ಅಜಾನ್ ಬೇಡ; ಮಸೀದಿಗಳಿಗೆ ಕೋರ್ಟ್ ಸೂಚನೆ

ದೆಹಲಿ: ಒಂದೆಡೆ ಕೊರೋನಾ ಸಂಕಷ್ಟ.. ಮತ್ತೊಂದೆಡೆ ಲಾಕ್’ಡೌನ್ ಮಾರ್ಗಸೂಚಿಯ ಗೊಂದಲ.. ಈ ನಡುವೆ ರಂಜಾನ್ ಆಚರಣೆ ಸಂದರ್ಭದಲ್ಲಿ ನ್ಯಾಯಾಲಯದ ಅಭಿಪ್ರಾಯ ಕುತೂಹಲದ ಕೇಂದ್ರಬಿಂದುವಾಗಿದೆ.

ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಮೂಲಕ ಆಜಾನ್ ಕೂಗುವುದಕ್ಕೆ ಅಲ್ಲಹಾಬಾದ್ ಹೈಕೋರ್ಟ್ ಬ್ರೇಕ್ ಹಾಕಿದೆ. ಲೌಡ್ ಸ್ಪೀಕರ್ ಮೂಲಕ ಆಜಾನ್ ಕೂಗುವಂತಿಲ್ಲ, ಬೇಕಿದ್ದರೆ ತಮ್ಮಷ್ಟಕ್ಕೆ ತಾವೇ ಆಜಾನ್ ಕೂಗಬಹುದು ಎಂದು ನ್ಯಾಯಾಲಯ ಹೇಳಿದೆ.

ಉತ್ತರಪ್ರದೇಶದ ಗಾಜಿಪುರ್, ಫರೂಖಾಬಾದ್ ಸಹಿತ ಮಸೀದಿಗಳಲ್ಲಿ ಆಜಾನ್ ಗೆ ನಿರ್ಬಂಧವಿಧಿಸುವುದರ ಕುರಿತು ನಡೆಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಆಜಾನ್ ಇಸ್ಲಾಮಿನ ಅವಿಭಾಜ್ಯ ಅಂಗವಾಗಿದೆ ಎಂದು ಮುಸ್ಲಿಂ ಸಮುದಾಯದ ಪರ ವಾದ ಮಂಡಿಸಲಾಗಿತ್ತು. ಇದಕ್ಕೆ ನ್ಯಾಯಾಲಯವು ಸಹಮತ ವ್ಯಕ್ತಪಡಿಸಿತು. ಆದರೆ ಧ್ವನಿವರ್ಧಕಗಳ ಮೂಲಕ ಆಜಾನ್ ಕೂಗುವುದು ಧರ್ಮದ ಅವಿಭಾಜ್ಯ ಅಂಗ ಎಂದು ಹೇಳಲು ಸಾಧ್ಯವಿಲ್ಲವೆಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿಯಾದರು.

ಈ ವಿಚಾರದಲ್ಲಿ ಜಿಲ್ಲಾ ನ್ಯಾಯಾಲಯಗಳ ಆದೇಶವನ್ನು ರದ್ದುಪಡಿಸಿದ ಅಲ್ಲಹಾಬಾದ್ ಹೈಕೋರ್ಟ್ ಮಸೀದಿಗಳಲ್ಲಿ ಮಸೀದಿ ಲೌಡ್ ಸ್ಪೀಕರ್ ಗಳಲ್ಲಿ ಆಜಾನ್ ಕೂಗುವಂತಿಲ್ಲ ಎಂದು ಹೇಳಿದೆ. ವ್ಯಕ್ತಿಗಳು ತಮ್ಮಷ್ಟಕ್ಕೆ ತಾವು ಮಾತ್ರ ಆಜಾನ್ ಕೂಗಬಹುದೆಂದು ಹೇಳಿದೆ.

ಇದನ್ನೂ ಓದಿ.. ಡಾನ್ ಮುತ್ತಪ್ಪ ರೈ ತಲೆ ತಗ್ಗಿಸಿದ್ದು ಈ ಖಡಕ್ ಅಧಿಕಾರಿಯ ಮಾತಿಗೆ ಮಾತ್ರ

Related posts