ಕೊರೋನಾ ಆತಂಕ ; ಕಾರ್ಮಿಕರಿಗೆ ಕಡ್ಡಾಯ ರಜೆ

ಬೆಂಗಳೂರು: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಈಗಾಗಲೇ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಳಿ ತೆಗೆದುಕೊಂಡಿದೆ. ನೆರೆಯ ಭಾರತಕ್ಕೂ ತನ್ನ ಕಬಂದ ಬಾಹುವನ್ನು ಕೊರೋನಾ ವಿಸ್ತರಿಸುತ್ತಿದ್ದು, ಇತ್ತ ಐಟಿ ಹಬ್ ಬೆಂಗಳೂರಿನಲ್ಲೂ ಆತಂಕ ಮನೆಮಾಡಿದೆ.

ಇದೆ ವೇಳೆ ಕೊರೋನಾ ವೈರಸ್ ಬಗ್ಗೆ ವ್ಯಾಪಕ ಜಾಗೃತಿ ನಡೆಯುತ್ತಿದ್ದು, ಎಲ್ಲೆಲ್ಲೂ ಮುಂಜಾಗೃತಾ ಕ್ರಮ ವಹಿಸಲಾಗುತ್ತಿದೆ. ಈ ನಡುವೆ ಕಾರ್ಮಿಕರಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಕಂಡುಬಂದರೆ ಅಂಥವರಿಗೆ 28 ದಿನ ವೇತನ ಸಹಿತ ರಜೆ ನಿಡಬೇಕೆಂದು ಖಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.

Related posts