ಕರ್ನಾಟಕದಲ್ಲಿ ಕೊರೋನಾ ತಲ್ಲಣ; ಸೋಂಕಿತರ ಸಂಖ್ಯೆ 474

ಬೆಂಗಳೂರು: ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇದ್ದಿ ಶುಕ್ರವಾರ ಕಳವಳಕಾರಿ ಸುದ್ದಿಯನ್ನೇ ನೀಡಿತು. ಕರ್ನಾಟಕದ ಪಾಲಿಗೆ ಅತ್ಯಂತ ಕರಾಳ ಸಂಖ್ಯೆ ಎಂಬಂತಾಯಿತು. ಕರ್ನಾಟಕದಲ್ಲಿ ಶುಕ್ರವಾರ ಒಂದೇ ದಿನ ಬರೋಬ್ಬರಿ 29 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆಯಾಗಿದೆ.

ಪ್ರಸ್ತುತ ದೇಶಾದ್ಯಂತ ಲಾಕ್’ಡೌನ್ ಜಾರಿಯಲ್ಲಿದೆ. ಆದರೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚತ್ತಲೇ ಇದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ತುಸು ನೆಮ್ಮದಿ ಎನ್ನುತ್ತಾ ಬೀಗುತ್ತಿದ್ದ ಕನ್ನಡಿಗರು ಶುಕ್ರವಾರದ ಈ ಅಂಕಿ ಅಂಶ ಕಂಡು ಬೆಚ್ಚಿಬೀಳುವಂತಾಯಿತು.
ಕರ್ನಾಟಕದಲ್ಲಿ ಶುಕ್ರವಾರ ಒಂದೇ ದಿನ 29 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಈ ಪೈಕಿ 19 ಪ್ರಕರಣಗಳು ರಾಜಧಾನಿ ಬೆಂಗಳೂರನ್ನು ಕೇಂದ್ರೀಕರಿಸಿದೆ.

ಬಿಹಾರ ಪ್ರಯಾಣ ಹಿಸ್ಟರಿ ಹೊಂದಿರುವ ವ್ಯಕ್ತಿಯಿಂದಲೇ ಸುಮಾರು 20 ಮಂದಿಗೆ ಸೋಂಕು ಹರಡಿದೆ ಎನ್ನಲಾಗುತ್ತಿದ್ದು, ಆ ವ್ಯಕ್ತಿ ವಾಸವಾಗಿದ್ದ ಬೆಂಗಳೂರಿನ ಹೊಂಗಸಂದ್ರದಲ್ಲಿ ತೀವ್ರ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಈ ನಡುವೆ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 474 ಕ್ಕೆ ಏರಿಕೆಯಾಗಿದೆ. ಈ ಪೈಕಿ 145 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರೆ, 18 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ.. ಶಾಸಕ ರಾಜೇಶ್ ನಾಯ್ಕ್’ಗೆ ಅಭಿನಂದನೆಗಳ ಮಹಾಪೂರ

 

Related posts