ಸ್ನೇಹಿತನ ಕುಟುಂಬದ ನೆರವಿಗೆ ನಿಂತ ದರ್ಶನ್; ಬುಲೆಟ್ ಪ್ರಕಾಶ್ ಮಗಳ ಮದುವೆಯ ಜವಾಬ್ಧಾರಿ ತನ್ನದು ಎಂದ ನಟ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಬುಲೆಟ್ ಪ್ರಕಾಶ್ ಅತೀ ಸಣ್ಣ ವಯಸ್ಸಿನಲ್ಲೇ ವಿಧಿವಶರಾಗಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ ಸಹಿತ ಹಾಸ್ಯ ರತ್ನಗಳ ಜೊತೆಯಲ್ಲೇ ಬುಲೆಟ್ ಪ್ರಕಾಶ್ ಕೂಡಾ ತನ್ನದೇ ಹಾಸ್ಯ ಶೈಲಿಯ ಅಭಿನಯದಿಂದ ಸಿನಿ ರಸಿಕರ ಗಮನ ಸೆಳೆಯುತ್ತಿದ್ದರು. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಈ ನಟ ಕನ್ನಡದ ಬಹುತೇಕ ತಾರೆಯರ ಜೊತೆ ತೆರೆಯನ್ನು ಹಂಚಿಕೊಂಡವರು.

ಈ ನಟನಿಗೆ ತೀರಾ ಹತ್ತಿರದ ಸ್ನೇಹ ಹೊಂದಿದ್ದವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಅವರ ಕೌಟುಂಬಿಕ ಸಮಸ್ಯೆ ಎದುರಾದಾಗ ಅವರ ಕಾನೂನು ಹೋರಾಟದಲ್ಲಿ ಬುಲೆಟ್ ಪ್ರಕಾಶ್ ನೆರವಾಗಿದ್ದರು.

ಬುಲೆಟ್ ಪ್ರಕಾಶ್ ನಿಧಾನ ನಟ ದರ್ಶನ್. ಅವರಿಗೂ ಆಘಾತ ತಂದಿದೆ. ಸ್ನೇಹಿತನ ಅಗಲುವಿಕೆ ಬಗ್ಗೆ ಅತೀವ ನೋವು ವ್ಯಕ್ತಪಡಿಸಿರುವ ನಟ ದರ್ಶನ್, ಪ್ರಕಾಶ್ ಕುಟುಂಬಕ್ಕೆ ಸಕಲ ರೀತಿಯಲ್ಲೂ ನೆರವು ನೀಡುವುದಾಗಿ ಹೇಳಿದ್ದಾರೆ. ಬುಲೆಟ್ ಪ್ರಕಾಶ್ ಮಗಳ ವಿವಾಹದ ಜವಾಬ್ಧಾರಿ ತನ್ನದು ಎಂದಿರುವ ಅವರು, ಇದಕ್ಕೆ ಬೇಕಾದ ಎಲ್ಲಾ ರೀತಿಯ ನೆರವು ನೀಡುವುದಾಗಿ ದರ್ಶನ್ ಹೇಳಿದ್ದಾರೆ. ಈ ವಿಚಾರವನ್ನು ಹಿರಿಯ ನಿರ್ಮಾಪಕ ರಾಮಮೂರ್ತಿ ಜೊತೆ ದರ್ಶನ್ ಹಂಚಿಕೊಂಡಿದ್ದಾರೆ.

Related posts