ದರ್ಶನ್ ಸಿನಿಮಾ ಹಿಟ್ ಆಗುತ್ತವೆ.. ರಹಸ್ಯ ಏನು ಗೊತ್ತೇ..? ‘ಅಧಿಪತಿ’ ಅರ್ಥದ ಹಿಂದಿದೆ ರಹಸ್ಯ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ ಸಿನಿಮಾ ಅನಾದರೆ ಕನ್ನಡ ಸಿನಿಮಾ ರಂಗದಲ್ಲಿ ಹವಾ ಎಬ್ಬಿಸುತ್ತಲೇ ಇರುತ್ತವೆ. ಇದೀಗ ಲಾಕ್’ಡೌನ್ ಸಂದರ್ಭದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಚಟುವಟಿಕೆ ಸಾಗದೆ ಇಂಡಸ್ಟ್ರಿಯೇ ಸ್ಥಬ್ಧವಾಗಿದ್ದರೂ ದರ್ಶನ ಫ್ಯಾನ್ಸ್ ನಿರಾಶರಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್’ದೇ ಹವಾ.

ಕೆಲ ದಿನಗಳ ಹಿಂದಷ್ಟೇ ದರ್ಶನ್ ತೂಗುದೀಪ್ ಅಭಿನಯದ ರಾಬರ್ಟ್ ಸಿನಿಮಾದ ಮೇಕಿಂಗ್ ವೀಡಿಯೋ ಬಿಡುಗಡೆಯಾಗಿತ್ತು. ಅದು ಸಾಮಾಜಿಕ ಜಾಲತಾಣಗಳನ್ನು ಎಂಟ್ರಿಕೊಟ್ಟಿದ್ದೇ ತಡ ಅದನ್ನು ನೋಡಲು ವೀಕ್ಷರು ಮುಗಿಬಿದ್ದಿದ್ದಾರೆ. ಇದೀಗ ಕೊರೋನಾ ಆತಂಕದಲ್ಲಿದ್ದ ಮಂದಿ ರಾಬರ್ಟ್ ಮೇನಿಯಾ ಬಗ್ಗೆಯೂ ತಲೆಕೆಡಿಸಿಕೊಂಡಿದ್ದು ವಿಶೇಷ. ದರ್ಶನ್ ಅಭಿನಯದ ಈ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲಚಿತ್ತರಾಗಿದ್ದಾರೆ.

ರಾಬರ್ಟ್ ಚಿತ್ರದ ಮೇಕಿಂಗ್ ವೀಡಿಯೋ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

‘ಅಧಿಪತಿ’ ಅರ್ಥದ ಟೈಟಲ್..!!

ದರ್ಶನ್ ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ತನ್ನದೇ ಆದ ಪ್ರಾಬಲ್ಯದಿಂದ ಸಾಗುತ್ತಿರುವುದು ವಿಶೇಷ. ಅದರಲ್ಲೂ ದರ್ಶನ್ ಅಭಿನಯದ ಟೈಟಲ್ ಕೂಡಾ ಒಂದು ರೀತಿ ಪಾರುಪತ್ಯದ ಅರ್ಥದಲ್ಲಿ ಇರುತ್ತದೆ. ಚಕ್ರವರ್ತಿ, ಜಗ್ಗು ದಾದಾ, ಯಜಮಾನ, ಬಾಸ್, ಅಯ್ಯಾ, ಸ್ವಾಮಿ, ಭೂಪತಿ, ಇಂದ್ರ, ಸಾರಥಿ, ಒಡೆಯ.. ಹೀಗೆ ಅಧಿಪತಿಯ ಅರ್ಥಕ್ಕೆ ಸರಿಹೊಂದುವ ಟೈಟಲ್’ಗಳೇ ದರ್ಶನ್ ಪಾಲಿಗೆ ವರದಾನವಾಗಿರುವುದು.

‘ಚಕ್ರವರ್ತಿ’ ಸಿನಿಮಾ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ದಾಖಲೆ ಬರೆದಿದೆ. ‘ಸಾರಥಿ’ಯಂತೂ ದರ್ಶನ್ ವರ್ಚಸ್ಸನ್ನು ನೂರ್ಮಡಿಗೊಳಿಸಿತ್ತು. ಅದರಲ್ಲೂ ‘ಜಗ್ಗು ದಾದಾ’ ಅಭಿಮಾನಿ ಬಳಗದಲ್ಲಿ ಒಂದು ರೀತಿ ಕ್ರೇಜ್ ಹುಟ್ಟಿಸಿದರೆ, ಈ ‘ಅಯ್ಯಾ’, ‘ಸ್ವಾಮಿ’, ‘ಭೂಪತಿ’, ‘ಇಂದ್ರ’, ‘ಒಡೆಯಾ’ ಚಿತ್ರಗಳೂ ಕನ್ನಡ ಸಿನಿಮಾ ಜಗತ್ತಲ್ಲಿ ದರ್ಶನ್ ಪಾರುಪತ್ಯಕ್ಕೆ ಸಾಕ್ಷಿಯಾದವು.

ಈ ನಡುವೆ ಈ ನಟನ ವರ್ಚಸ್ಸಿಗೂ ತಕ್ಕಂತೆ ವೀಕ್ಷಕರಿಂದಲೂ ಪ್ರತಿಕ್ರಿಯೆ ಬರುತ್ತಿರುವುದು ವಿಶೇಷ.

ಇದೀಗ ‘ರಾಬರ್ಟ್’ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿಯೇ ಇದೆ. ಲಾಕ್’ಡೌನ್ ನಂತರದ ದಿನಗಳಲ್ಲಿ ‘ರಾಬರ್ಟ್’ ಮೇನಿಯಾ ಹೇಗಿರುತ್ತೆ? ದರ್ಶನ್ ಟೀಮ್ ಏನೆಲ್ಲಾ ಖುಷಿ ಸಮಾಚಾರ ಕೊಡುತ್ತೆ ಎಂಬುದೇ ಕಾತುರದ ವಿಚಾರ.

ಇದನ್ನೂ ಓದಿ.. ಮುತ್ತಪ್ಪ ರೈ ತಲೆ ತಗ್ಗಿಸಿದ್ದು ಈ ಖಡಕ್ ಅಧಿಕಾರಿಯ ಮಾತಿಗೆ ಮಾತ್ರ 

 

Related posts