ಅಂದೊಂದು ದಿನ ಚಪ್ಪಾಳೆ.. ಮತ್ತೊಮ್ಮೆ ದೀಪ.. ಇದೀಗ ಆಗಸದಿಂದ ಪುಷ್ಪವೃಷ್ಟಿ.. ಮೋದಿ ಕರೆಗೆ ಸೇನೆ ಸೆಲ್ಯೂಟ್

ದೆಹಲಿ: ದೇಶಾದ್ಯಂತ ಕೊರೋನಾ ವೈರಾಣು ಮರಣ ಮೃದಂಗವನ್ನೇ ಭಾರಿಸುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿವೆ. ಈ ಅಗೋಚರ ವೈರಾಣು ಹಾವಳಿಗೆ ಬಲಿಯಾದವರ ಸಂಖ್ಯೆಯೂ ಆತಂಕಕಾರಿ ಎಂಬಂತೆ ಹೆಚ್ಚುತ್ತಿದೆ.

ಈ ನಡುವೆ ಕೊರೋನಾ ವೈರಾಣು ಸೋಂಕಿತರನ್ನು ಬದುಕಿಸುವ ಆತುರದಲ್ಲಿ ಹುತಾತ್ಮರಾದವರೂ ಅನೇಕರು. ಅಷ್ಟೇ ಅಲ್ಲ, ಸೋಂಕಿತರಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿರುವವರನ್ನು ಬದುಕಿಸಲು ಅವೆಷ್ಟೋ ಮಂದಿ ವೈದ್ಯರು, ನರ್ಸುಗಳು, ಪೊಲೀಸರು, ಸೇರಿದಂತೆ ಅನೇಕರು ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಅಂಥವರಿಗೆ ಗೌರವ ಸಲ್ಲಿಸುವ ಅಪೂರ್ವ ಸನ್ನಿವೇಶಕ್ಕೆ ಭಾರತ ಇಂದು ಸಾಕ್ಷಿಯಾಯಿತು. ಈ ಕೊರೋನಾ ವಾರಿಯರ್ಸ್’ಗೆ ಆಗಸದಿಂದ ಪುಷ್ಪವೃಷ್ಟಿ ಮಾಡಿ ನೇಮಿಸಲಾಯಿತು.

ಕೊರೋನಾ ವೈರಾಣು ಆತಂಕ ಆರಂಭವಾದಾಗಿನಿಂದಲೂ ವೈದ್ಯ ಲೋಕ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿದೆ. ಈ ಕೊರೋನಾ ವಾರಿಯರ್ಸ್’ಗೆ ಪ್ರಧಾನಿ ಮೋದಿ ಕರೆಯಂತೆ ಅಂದೊಂದು ಭಾನುವಾರ ಜನತಾ ಕರ್ಫ್ಯೂ ದಿನದಂದು ಚಪ್ಪಾಳೆ, ಗಂಟೆ-ಜಾಗಟೆ ಮೂಲಕ ಗೌರವ ಸಲ್ಲಿಸಲ್ಲಿಸಲಾಗಿತ್ತು. ಬಳಿಕ ಮತ್ತೊಂದು ಭಾನುವಾರ ರಾತ್ರಿ ದೀಪ ಬೆಳಗಿಸಿ ವಿಜಯದುಂದುಭಿ ಭಾರಿಸಲಾಯಿತು. ಇದೀಗ ರಕ್ಷಣಾ ಕ್ಷೇತ್ರದ ಯೋಧರು ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಆಗಸದಿಂದ ಪುಷ್ಪವೃಷ್ಟಿ ಮಾಡಿ ಗೌರವ ಸಲ್ಲಿಸಿದೆ.

ವಿವಿಧ ಸೇನಾ ಪಡೆ ಯೋಧರು ದೆಹಲಿ, ಚೆನ್ನೈ, ಮುಂಬೈ, ಗೋವಾ, ಕಾರವಾರ, ತಿರುವನಂತಪುರ, ಇಟಾನಗರ, ಗುವಾಹಟಿ, ಶಿಲಾಂಗ್, ಮುಂಬೈ, ಪೋರಬಂದರ್, ಕೊಚ್ಚಿ ಸಹಿತ ಆರ್ಮಿ, ನೇವಿ ಹಾಗೂ ವಾಯು ಸೇನಾ ಸಿಬ್ಬಂದಿಯ ಈ ಗೌರವ ಕೈಂಕರ್ಯ ದೇಶಪ್ರೇಮಿ ಸಮೂಹವನ್ನು ಮೂಕವಿಸ್ಮಿತವಾಗಿಸಿದೆ.

ಇದನ್ನೂ ಓದಿ.. ಸಹಾಯ ಹಸ್ತ: ಅತ್ತ ರಾಜೇಶ ‘ನಾಯಕ’.. ಇತ್ತ ಡಿಕೆಶಿ ‘ಹೀರೋ’

 

Related posts