ಆಕ್ರೋಶಕ್ಕೆ ಬೆಚ್ಚಿದ ಸರ್ಕಾರ; ಉಚಿತ ಬಸ್ ಸೇವೆ ಘೋಷಣೆ

ಬೆಂಗಳೂರು: ಕೊರೋನಾ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರ ಮೇಲೆ ರಾಜ್ಯ ಸರ್ಕಾರ ಅನುಕಂಪ ತೋರಿದೆ. ಕೆಲಸ ಅರಸಿ ದೂರದ ಊರುಗಳಿಗೆ ತೆರಳಿ ಲಾಕ್’ಡೌನ್ ಜಾರಿಯಿಂದಾಗಿ ಸಂಕಷ್ಟದಲ್ಲಿರುವ ಜನರು ತಮ್ಮ ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಸರ್ಕಾರ ಬಸ್ ವ್ಯವಸ್ಥೆ ಮಾಡಿದೆ. ಈ ಸಾರಿಗೆ ಬಸ್ಸುಗಳಲ್ಲಿ 3 ದಿನ ಉಚಿತ ಸೇವೆ ಸಿಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ದುಬಾರಿ ಟಿಕೆಟ್ ಬಗ್ಗೆ ಸಾರವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಈ ತೀರ್ಮಾನ ಕೈಗೊಂಡಿದ್ದಾರೆ.

ಇದನ್ನೂ ಓದಿ.. ಅಂದೊಂದು ದಿನ ಚಪ್ಪಾಳೆ.. ಮತ್ತೊಮ್ಮೆ ದೀಪ.. ಇದೀಗ ಆಗಸದಿಂದ ಪುಷ್ಪವೃಷ್ಟಿ.. ಮೋದಿ ಕರೆಗೆ ಸೇನೆ ಸೆಲ್ಯೂಟ್

ಲಾಕ್’ಡೌನ್ 3ನೇ ಅವಧಿಗೆ ವಿಸ್ತಾರವಾಗಿದ್ದು ಆ ನಡುವೆ ಅತಂತ್ರ ಸ್ಥಿತಿಯಲ್ಲಿರುವ ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಊರುಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬಸ್ ದರ ಮಾತ್ರ ದುಪ್ಪಟ್ಟಾಗಿತ್ತು.

  • ಬೆಂಗಳೂರಿನಿಂದ ವಿಜಾಪುರಕ್ಕೆ 41,340 ರೂಪಾಯಿ
  • ಬೆಂಗಳೂರಿನಿಂದ ಬೀದರಿಗೆ 54,600 ರೂಪಾಯಿ
  • ಬೆಂಗಳೂರಿನಿಂದ ಕಲಬುರ್ಗಿಗೆ 45,240 ರೂಪಾಯಿ
  • ಬೆಂಗಳೂರಿನಿಂದ ಮಂಗಳೂರಿಗೆ 28,080 ರೂಪಾಯಿ
  • ಬೆಂಗಳೂರಿನಿಂದ ಬೆಳಗಾವಿಗೆ 40,170 ರೂಪಾಯಿ
  • ಬೆಂಗಳೂರಿನಿಂದ ಧಾರವಾಡಕ್ಕೆ 33,930 ರೂಪಾಯಿ

ಇಷ್ಟು ಹಣವನ್ನು ಪಾವತಿಸಿ 30 ಮಂದಿ ಒಂದು ಬಸ್ಸಿನಲ್ಲಿ ಪ್ರಯಾಣಿಸಬಹುದಾಗಿತ್ತು. ಪ್ರತೀಯೊಬ್ಬರ ಮೇಲೂ ದುಪ್ಪಟ್ಟು ದರ ನಿಗದಿಪಡಿಸಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಈ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ‘ಕಂಗಾಲಾಗಿರುವ ಕೂಲಿ ಕಾರ್ಮಿಕರನ್ನು ಊರಿಗೆ ಕಳುಹಿಸಲು ಎಷ್ಟು ಹಣ ಬೇಕು ಹೇಳಿ. ನಾನು ಭಿಕ್ಷೆ ಎತ್ತಿಯಾದರೂ ಕೊಡುತ್ತೇನೆ. ಆದರೆ ಬಸ್ ವ್ಯವಸ್ಥೆ ಕಲ್ಪಿಸಿ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದವೂ ಅವರು ವಾಗ್ದಾಳಿ ನಡೆಸಿದ್ದರು.

ಪ್ರತಿಪಕ್ಷಗಳ ಸಲಹೆಯನ್ನು ಪರಿಗಣಿಸಿರುವ ಸಿಎಂ ಇದೀಗ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಇದನ್ನೂ ಓದಿ.. ಕುತೂಹಲ ಕೆರಳಿಸಿದ ಸಚಿವ ಶ್ರೀರಾಮುಲು ದುಬಾರಿ ಮಾಸ್ಕ್.. 

Related posts