ಕಳೆದ ಭಾನುವಾರ ದೀಪದ ಕರೆ; ಈ ಬಾರಿ ಪ್ರಾರ್ಥನೆ, ಕೈಂಕರ್ಯ

ಕೊರೋನಾ ನಿಯಂತ್ರಣ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಚಪ್ಪಾಳೆ ನಂತರ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಈ ಭಾನುವಾರ ಪ್ರಾರ್ಥನೆ ಕೈಂಕರ್ಯ..

ಬೆಂಗಳೂರು: ಕೊರೋನಾ ಮಹಾಮಾರಿಯನ್ನು ಪರಿಸರದಿಂದ ದೂರ ಎತ್ತದಿದ್ದರೆ ಪರಿಸ್ಥಿತಿ ತಿಳಿಯಾಗಲ್ಲ ಎನ್ನುವುದು ಎಲ್ಲರ ಜಾಗೃತಿ ಕಹಳೆ. ಒಂದೆಡೆ ಲಾಕ್ ಡೌನ್ ಜಾರಿಯಲ್ಲಿದ್ದು, ಇದೆ ಸಂದರ್ಭದಲ್ಲಿ ಜನತಾ ಕರ್ಫ್ಯೂ, ಸಾಮೂಹಿಕ ಚಪ್ಪಾಳೆ, ಸಾಮೂಹಿಕ ಶಂಖ ನಾದ, ಜಾಗಟೆಗಳ ನಿನಾದ, ದೀಪೋತ್ಸವದ ಕೈಂಕರ್ಯ.. ಹೀಗೆ ಸರಣಿ ಕಾರ್ಯಕ್ರಮಗಳ ನಂತರ ಇದೀಗ ಈ ಭಾನುವಾರದಂದು ಮತ್ತೊಂದು ರೀತಿಯಲ್ಲಿ ಒಗ್ಗಟ್ಟು ಪ್ರದರ್ಶಿಸಲು ಜನತೆ ಸಜ್ಜಾಗಿದ್ದಾರೆ.

ಇಷ್ಟಲಿಂಗ ಪೂಜೆ

ಮೋದಿಯವರು ದೀಪೋತ್ಸವಕ್ಕೆ ಕರೆ ನೀಡಿರುವ ಮಾದರಿಯಲ್ಲೇ ಕಾಂಗ್ರೆಸ್ ನಾಯಕ, ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲರು ಇಷ್ಟಲಿಂಗ ಪೂಜೆಗೆ ಕರೆ ಕೊಟ್ಟಿದ್ದಾರೆ. ಏಪ್ರಿಲ್ 13ರ ಸೋಮವಾರ ಸಂಜೆ 7ಗಂಟೆಗೆ ಲಿಂಗವಂತರು ಹಾಗೂ ಬಸವಾದಿ ಎಲ್ಲ ಶರಣರ ಭಕ್ತರು ತಮ್ಮ ತಮ್ಮ ಮನೆಗಳಿಂದಲೇ ಧ್ಯಾನಸ್ಥರಾಗಿ ವಿಶ್ವಕ್ಕೆ ಮಾರಕವಾಗಿರುವ ಕೊರೋನಾ ಹಾವಳಿಯಿಂದ ಮುಕ್ತಗೊಳಿಸಲು ಸಾಮೂಹಿಕ ಪೂಜೆ ನೆರವೇರಿಸಬೇಕೆಂದು ಕರೆ ಕೊಟ್ಟಿದ್ದಾರೆ.

ಪ್ರಾಂತ ಪ್ರಾರ್ಥನಾ ದಿನ

ಅದಕ್ಕೂ ಮುನ್ನ ದಿನ, ಭಾನುವಾರ ಪ್ರಾರ್ಥನಾ ಕೈಕಾರ್ಯಕ್ಕೆ ಸಂಘ ಪರಿವಾರದ ಮುಖಂಡರು ಕರೆ ನೀಡಿದ್ದಾರೆ. ಪ್ರಾಂತ ಪ್ರಾರ್ಥನಾ ದಿನವನ್ನು ಆಚರಿಸಲು ಕರೆ ನೀಡಿರುವ ಸಂಘದ ಪ್ರಮುಖರು, ತಮ್ಮ ಮನೆಯಂಗಳದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸಲಹೆ ಮಾಡಿದ್ದಾರೆ.

ಪ್ರಾರ್ಥನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ https://www.youtube.com/watch?v=7qAO9bpWjHg 

ಸಂಘದ ಪ್ರಾಥನೆಯನ್ನು ಹಾಡಬೇಕೆಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಿರಿಯರ ಕರೆಯನ್ನು ಅನುಸರಿಸಲು ಸಂಘದ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ.

Related posts