ಉಗ್ರರಿಗೆ ನೆರವು ಆರೋಪ ; ಹಫೀಜ್ ಸಯೀದ್ ಗೆ ಜೈಲು ಶಿಕ್ಷೆಯ ತೀರ್ಪು

ಲಾಹೋರ್: ಮುಂಬೈ ವಿದ್ವಾಂಸದಲ್ಲಿ ಪ್ರಮುಖ ಹೆಸರಾಗಿ ಕೇಳಿಬರುತ್ತಿದ್ದ ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಗೆ ಪಾಕಿಸ್ತಾನದ ನ್ಯಾಯಾಲಯ ಜೈಲು ಶಿಕ್ಷೆಯ ತೀರ್ಪು ಪ್ರಕಟಿಸಿದೆ.

ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದ ಆರೋಪ ಕುರಿತಂತೆ ವಿಚಾರಣೆ ನಡೆಸಿದ ಪಾಕಿಸ್ತಾನ ಭಯೋತ್ಪಾನೆ ನಿಗ್ರಹ ನ್ಯಾಯಾಲಯ ಈ ಜೈಲು ಶಿಕ್ಷೆಯನ್ನು ಪ್ರಕಟಿಸಿತು.

ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತಿದ್ದ ಆರೋಪ ಕುರಿತ ಎರಡು ಪ್ರಕರಣಗಳಲ್ಲಿ ಕಳೆದ ಡಿ.11 ರಂದು ದೋಷಾರೋಪಣೆ ಪಟ್ಟಿ ಸಲ್ಲಿಸಕೆಯಾಗಿತ್ತು. ತ್ವರಿತವಾಗಿ ವಿಚಾರಣೆ ನಡೆಸಿದ ಕೋರ್ಟ್ ಈ ಎರಡೂ ಪ್ರಕರಣಗಳಲ್ಲಿ ಹಫೀಜ್ ಸಯೀದ್ ಗೆ ತಲಾ 5ವರೆ ವರ್ಷಗಳ ಶಿಕ್ಷೆ ಪ್ರಕಟಿಸಿದೆ.

Related posts