ಬ್ಯಾಂಕ್ ರಾಯಭಾರಿಯಾಗಿ ಬ್ಯಾಂಕ್ ಅಮಿತಾಬ್ ಬಚ್ಚನ್

ಮುಂಬೈ: ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರು ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಐಡಿಎಫ್‍ಸಿ ಫರ್ಸ್ಟ್ ಬ್ಯಾಂಕ್’ನ ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ. ನಟ ಅಮಿತಾಬ್ ಬಚ್ಚನ್ ಅವರನ್ನು ಸಂಸ್ಥೆಯ ಮೊದಲ ಬ್ರಾಂಡ್ ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ಐಡಿಎಫ್‍ಸಿ ಫರ್ಸ್ಟ್ ಬ್ಯಾಂಕ್ ಘೋಷಿಸಿದೆ.

ಈ ಹಿಂದೆ ಅನೇಕ ಸಂಸ್ಥೆಗಳ ರಾಯಭಾರಿಯಾಗಿ ಸೇವೆ ಸಲ್ಲಿಸಿರುವ ಅಮಿತಾಬ್ ಬಚ್ಚನ್ ಅವರಿಂದಾಗಿ ತಮ್ಮ ಬ್ಯಾಂಕ್ ಕೂಡಾ ಯಶಸ್ಸು ಸಾಧಿಸಬಹುದು ಎಂಬ ವಿಶ್ವಾಸವನ್ನು ಐಡಿಎಫ್‍ಸಿ ಫರ್ಸ್ಟ್ ಬ್ಯಾಂಕ್ ವ್ಯಕ್ತಪಡಿಸಿದೆ.

ಅಮಿತಾಬ್ ಅವರು ಸಾರ್ವಕಾಲಿಕ ಶ್ರೇಷ್ಠ ನಟರಾಗಿದ್ದಾರೆ. ಹಾಗಾಗಿ ಈ ನಟ ತಮ್ಮ ಸಂಸ್ಥೆಯ ರಾಯಭಾರಿಯಾಗಿರುವುದು ತಮಗೆ ಸಂತೋಷದ ವಿಷಯವಾಗಿದೆ ಎಂದು ಬ್ಯಾಂಕ್‍ ಹೇಳಿದೆ.

Related posts