ಕಣಿವೆ ರಾಜ್ಯದಲ್ಲಿ ಸೇನಾಕಾರ್ಯಾಚರಣೆ: ಇಬ್ಬರು ಶಂಕಿತರ ಹತ್ಯೆ

 

ಜಮ್ಮು-ಕಾಶ್ಮೀರ: ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದಿರುವ ಸೇನಾಪಡೆ ಇಂದು ಬೆಳ್ಳಂಬೆಳಗ್ಗೆ ಇಬ್ಬರು ಶಂಕಿತರನ್ನು ಹತ್ಯೆ ಮಾಡಿದೆ. , ಪಾಕಿಸ್ತಾನ ಜೊತೆ ನಂಟು ಹೊಂದಿದ್ದಾರೆನ್ನಲಾದ ಸಂಘಟನೆಗಳ ಸದಸ್ಯರು ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಸೇನೆ ಕಳೆದ ತಡರಾತ್ರಿಯಿಂದಲೇ ಕಾರ್ಯಾಚರಣೆಗಿಳಿದಿದೆ. ಅನಂತ್ ನಾಗ್ ಜಿಲ್ಲೆಯ ಸಂಗಂ ಟೌನ್ ಬಳಿಯಿರುವ ಗುಂಡ್ ಬಾಬಾ ಖಲೀಲ್ ಪ್ರದೇಶದಲ್ಲಿ ಇಬ್ಬರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಕಾರ್ಯಾಚರಣೆ ಸ್ಥಳದಲ್ಲಿ ಏಕೆ-47, ಒಂದು ಪಿಸ್ತೂಲ್ , ಮದ್ದುಗುಂಡು ಸಹಿತ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

 

Related posts