ಅಡುಗೆ ಅನಿಲ ದುಬಾರಿ; ಶೇ 20ರಷ್ಟು ದರ ಏರಿಕೆ

ದೆಹಲಿ: ಬೆಲೆ ಏರಿಕೆಯ ಹೊಡೆತದಿಂದ ತತ್ತರಿಸಿರುವ ದೇಶದ ಜನತೆಗೆ ಇದೀಗ ಅಡುಗೆ ಅನಿಲ ಸಿಲಿಂಡರ್ ಕೂಡಾ ಮತ್ತಷ್ಟು ದುಬಾರಿಯಾಗಲಿದೆ. ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಶೇಕಡಾ 20ರಷ್ಟು ದರ ಏರಿಕೆಯಾಗಿದೆ.

ಬೆಂಗಳೂರು ಸೇರಿದಂತೆ ದೇಶದ ಎಲ್ಲ ಮೆಟ್ರೋ ನಗರಗಳಲ್ಲಿ ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.

ಬೆಂಗಳೂರಿನಲ್ಲಿ ಪ್ರತೀ ಸಿಲಿಂಡರ್ ಬೆಲೆ 850 ರೂಪಾಯಿ ದಾಟಿದೆ.
ದೆಹಲಿಯಲ್ಲಿ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ದರ 144.50 ರೂಪಾಯಿ ಹೆಚ್ಚಳವಾಗಿದ್ದು 858.50 ರೂಪಾಯಿಗೆ ತಲುಪಿದೆ. ಕೊಲ್ಕತಾದಲ್ಲಿ 149 ರೂ. ಹೆಚ್ಚಳವಾಗಿದ್ದು ಪ್ರತೀ ಸಿಲಿಂಡರ್ ದರ 896 ರೂಪಾಯಿ ತಲುಪಿದೆ. ಮುಂಬೈನಲ್ಲಿ 145 ರೂಪಾಯಿ ಹೆಚ್ಚಳವಾಗಿದ್ದು ಪ್ರತೀ ಸಿಲಿಂಡರ್ ದರ 829.50, ಹಾಗೂ ಚೆನ್ನೈನಲ್ಲಿ 147 ರೂಪಾಯಿ ಹೆಚ್ಚಳವಾಗಿದ್ದು 881 ರೂಪಾಯಿಗೆ ತಲುಪಿದೆ.

Related posts