ಕೊರೋನಾ ಸಂಕಟ ಕಾಲದಲ್ಲಿ ಆಪತ್ಭಾಂಧವ; ಸೇವೆಯ ಜೊತೆ ಪ್ರಧಾನಿ,ಸಿಎಂ ಫಂಡ್’ಗೂ ಸಹಾಯಹಸ್ತ

ಯಾವುದೇ ಜಾಗೃತಿ ಕೆಲಸವೇ ಇರಲಿ, ಪಕ್ಷ, ಧರ್ಮದ ಸೀಮೆಯನ್ನೇ ದಾಟಿ ನೆರವಿನ ಹಸ್ತ ಚಾಚುವ ಇವರು ಇದೀಗ ಕೊರೋನಾ ಸಂಕಟ ಕಾಲದಲ್ಲಿ ಎಲ್ಲಾ ಸಂಘಟನೆಗಳ ಜೊತೆ ಸೇವೆಯಲ್ಲಿ ಸಕ್ರಿಯರು..
ಸೇವೆ, ದೇಣಿಗೆ ಜೊತೆ ಕೊರೋನಾ ವಾರಿಯರ್ಸ್ ಬಗ್ಗೆಯೂ ಹೆಚ್ಚಿನ ಕಾಳಜಿ..

ಮಂಗಳೂರು: ದೇಶಾದ್ಯಂತ ಕೊರೋನಾ ಸಂಕಟ ಎದುರಾಗಿದ್ದು ವೈರಾಣು ಹರಡದಂತೆ ವ್ಯಾಪಕ ಕ್ರಮ ಕೈಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಬಹುತೇಕ ಸಂಘ ಸಂಸ್ಥೆಗಳು ಭಾಗಿಯಾಗಿವೆ. ಲಾಕ್’ಡೌನ್ ಜಾರಿಯಿಂದಾಗಿ ಲಕ್ಷಾಂತರ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಇಂತಹಾ ಸ್ಥಿತಿಯಲ್ಲಿ ನಾಡಿನ ಖ್ಯಾತ ಶಿಕ್ಷಣ ತಜ್ಞ ಗಣೇಶ್ ರಾವ್ ಅವರು ಸದ್ದಿಲ್ಲದೇ ನಡೆಸುತ್ತಿರುವ ಸೇವೆ ನಾಡಿನ ಗಮನಸೆಳೆದಿದೆ. ಪ್ರಕೃತಿ ವಿಕೋಪಗಳಂತಹ ಸಂದರ್ಭಗಳಲ್ಲಿ ನೆರವಿನ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಗಣೇಶ್ ರಾವ್, ಇದೀಗ ಕೊರೋನಾ ಸಂಕಟದ ಕಾಲದಲ್ಲೂ ಅಸಹಾಯಕರ ಪಾಲಿಗೆ ಆಪತ್ಬಾಂಧವರೆನಿಸಿದ್ದಾರೆ.

ಪ್ರಧಾನಿ-ಸಿಎಂ ಫಂಡ್’ಗೂ ಸಹಾಯಹಸ್ತ

ಲಾಕ್’ಡೌನ್ ಆರಂಭದ ದಿನಗಳಿಂದಲೇ ಉದ್ಯೋಗವಂಚಿತ ಕುಟುಂಬಗಳಿಗೆ ಅಗತ್ಯ ಪಡಿತರ ವಿತರಿಸುತ್ತಾ ಬಂದಿರುವ ಇವರು, ಇದೀಗ ಪ್ರಧಾನಿ ಹಾಗೂ ಮುಖ್ಯಮಂತ್ರಿಯವರ ಕರೆಯನ್ನು ಗೌರವಿಸಿ ನೆರವಿನ ಹಸ್ತ ಚಾಚಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿ ಹಾಗೂ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಜಿ.ಆರ್.ಎಜುಕೇಶನ್ ಟ್ರಸ್ಟ್ ಪರವಾಗಿ ಗಣೇಶ್ ರಾವ್ ಅವರು 6 ಲಕ್ಷ ರೂಪಾಯಿಗಳನ್ನು ಸಮರ್ಪಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರನ್ನು ಭೇಟಿಮಾಡಿ ಚೆಕ್ ಹಸ್ತಅಂತರಿಸಿದರು.

ಮುಂದುವರಿದ ಸಹಾಯಹಸ್ತ:

ಯಾವುದೇ ಜಾಗೃತಿ ಕಾರ್ಯಕ್ರಮಗಳಿರಲಿ, ಯಾವುದೇ ವಿಕೋಪ ಸಂದರ್ಭಗಳೇ ಆಗಿರಲಿ ತಮ್ಮ ಸಂಸ್ಥೆಯ ಸ್ವಯಂಸೇವಕರನ್ನು ಬಳಸಿ ಅಖಾಡಕ್ಕೆ ಧುಮುಕುವ ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಗಣೇಶ್ ರಾವ್ ಅವರು ತಮ್ಮ ಸಂಸ್ಥೆಯ ಬಸ್ಸು ಸಹಿತ ಹಲವಾರು ವಾಹನಗಳನ್ನು ಉಚಿತವಾಗಿ ಕೊಡುವ ಮೂಲಕ ಔದಾರ್ಯ ಮೆರೆಯುತ್ತಾರೆ. ಯಾವುದೇ ಪಕ್ಷ, ಸಂಘಟನೆಗಳ ಕೋರಿಕೆಯೇ ಇರಲಿ ಅವುಗಳಿಗೆ ಗೌರವದಿಂದಲೇ ಸ್ಪಂಧಿಸುವ ಇವರು, ಪ್ರಸ್ತುತ ಕೊರೋನಾ ತಂದೊಡ್ಡಿದ ಪರಿಸ್ಥಿತಿಯಲ್ಲಿ ವಿವಿಧ ಸಂಘಗಳ ಕೆಲಸಗಳಿಗೆ ದೇಣಿಗೆ ನೀಡುತ್ತಿದ್ದಾರೆ. ಜೊತೆಗೆ ತಮ್ಮ ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಜಿ.ಆರ್.ಎಜುಕೇಶನ್ ಟ್ರಸ್ಟ್ ಮೂಲಕ ಈ ವರೆಗೂ ಪಡಿತರ, ಔಷಧಿ ಸಹಿತ 25 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ಸಾಮಾಗ್ರಿ ನೀಡಿ ಮಾನವೀಯತೆ ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಂಸ್ಥೆಯ ಪರವಾಗಿ ದುಡಿಯುವ ಮಂದಿಗೆ ಹಾಗೂ ತಮ್ಮ ಶಿಕ್ಷಣ ಸಂಸ್ಥೆಯನ್ನು ಅವಲಂಭಿಸಿರುವ ವಿದ್ಯಾರ್ಥಿ ಸಮೂಹ ಹಾಗೂ ಕುಟುಂಬಗಳಿಗೆ ಅಗತ್ಯ ನೆರವು ನೀಡಿರುವುದು ಗಮನಾರ್ಹ.

ಕೊರೋನಾ ವಾರಿಯರ್ಸ್

ಇದೆ ವೇಳೆ , ಮಂಗಳೂರು, ಬೆಂಗಳೂರಿನಲ್ಲಿ ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಯ ಒಡೆತನದ ನರ್ಸಿಂಗ್ ಕಾಲೇಜು ಹಾಗೂ ಆಯುರ್ವೇದ ಮೆಡಿಕಲ್ ಕಾಲೇಜು ಮೂಲಕ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿದ್ದಲ್ಲದೆ, ಕೊರೋನಾ ವಾರಿಯರ್ಸ್ ಜೊತೆಗೂ ಕೈಜೋಡಿಸಿರುವ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ.. ಅಸಹಾಯಕರಿಗೆ ನೆರವು; ಕರಾವಳಿ ಕಾಲೇಜು ಸೇನಾನಿಗಳ ಕೈಂಕರ್ಯ 

ಲಾಕ್ ಡೌನ್ ಸಂದರ್ಭದಲ್ಲಿ ಅಸಹಾಯಕರಿಗೆ ಅನ್ನ ಆಹಾರ ನೀಡುವುದೇ ಒಂದು ಸಮಾಜಮುಖಿ ಕೆಲಸ. ಅದರಲ್ಲೂ ಜೀವ ಸಂಜೀವಿನಿಯಾಗುವುದು ಮಾದರಿ ಕಾರ್ಯ.. ಇದು ಮಹಾ ಕೈಂಕರ್ಯ.

 

Related posts