ಮೇ 3ರ ನಂತರವೂ ಲಾಕ್’ಡೌನ್ ಮುಂದುವರಿಕೆ; ಟಾಸ್ಕ್ ಫೋರ್ಸ್ ಸಲಹೆ; ಮೋದಿ ನಿರ್ಧಾರದ ಬಗ್ಗೆ ಕುತೂಹಲ

ದೆಹಲಿ: ದೇಶದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರಾನಾ ಸೋಂಕನ್ನು ಹಾಡದಂತೆ ತಡೆಯಲು ಸಾಧ್ಯವಾಗುತ್ತಲೇ ಇಲ್ಲ. ಈಗಾಗಲೇ ಸೋಂಕಿತರ ಸಂಖ್ಯೆ 20000 ಗಡಿಯಲ್ಲಿದ್ದು ನಿತ್ಯವೂ ಕಳವಳಕಾರಿ ಸಂಖ್ಯೆಯಲ್ಲಿ ಸೋಂಕಿತರ ವರದಿಗಳು ಬರುತ್ತಿವೆ. ಹಾಗಾಗಿ ರೆಡ್ ಝೋನ್ ವಲಯಗಳಲ್ಲಿ ಮೇ 3 ರ ನಂತರವೂ ಲಾಕ್’ಡೌನ್ ಮುಂದುವರಿಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಕೊರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳನ್ನು ಹಾಟ್’ಸ್ಪಾಟ್’ಗಳೆಂದು ಗುರುತಿಸಿರುವ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕಿದೆ. ಹಾಗಾಗಿ ಲಾಕ್’ಡೌನ್’ನ ಎರಡನೇ ಅವಧಿ ಮುಗಿದ ನಂತರವೂ ಎಚ್ಚರಿಕೆಯ ಕ್ರಮಗಳನ್ನು ಮುಂದುವರಿಸುವ ಸಾಧ್ಯತೆಗಳಿವೆ.

ಈ ಕುರಿತಂತೆ ನೀತಿ ಆಯೋಗದ ಅಧ್ಯಕ್ಷರನ್ನೊಳಗೊಂಡ ರಾಷ್ಟ್ರೀಯ ಕಾರ್ಯಪಡೆಯು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದು, ಹಲವು ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚುವ ಆತಂಕ ಇದೆ ಎಂದು ಹೇಳಿದೆ. ಸುಮಾರು 20 ರಾಜ್ಯಗಳ 170 ಜಿಲ್ಲೆಗಳು ಕೊರೋನಾ ಹಾತ್’ಸ್ಪಾಟ್’ಗಳೆಂದು ಗುರುತಾಗಿದ್ದು ಬಹುತೇಕ ಕಡೆ ಪರಿಸ್ಥಿತಿ ಸುಧಾರಿಸಿಕೊಂಡಿಲ್ಲ ಎಂಬ ಸಂಗತಿಯತ್ತ ಈ ಕಾರ್ಯಪಡೆ ಬೊಟ್ಟು ಮಾಡಿದೆ.

ಕೋವಿಡ್-19 ನಿರ್ವಹಣೆಗಾಗಿ ರಚನೆಯಾಗಿರುವ ರಾಷ್ಟ್ರೀಯ ಕಾರ್ಯ ಪಡೆ ಮೇ 3ರ ನಂತರವೂ ಲಾಕ್ ಡೌನ್ ಮುಂದುವರೆಸುವಂತೆ ಸಲಹೆ ನೀಡಿರುವುದರಿಂದಾಗಿ ಕೇಂದ್ರ ಸರ್ಕಾರ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದೇ ಕುತೂಹಲಕಾರಿ ಸಂಗತಿ.

ಕರ್ನಾಟಕ ಹಾಟ್​​ಸ್ಪಾಟ್ 8 ಜಿಲ್ಲೆಗಳು

  • ಬೆಂಗಳೂರು ನಗರ
  • ಮೈಸೂರು 
  • ಬೆಳಗಾವಿ
  • ದಕ್ಷಿಣ ಕನ್ನಡ 
  • ಬೀದರ್ 
  • ಕಲ್ಬುರ್ಗಿ 
  • ಬಾಗಲಕೋಟೆ
  • ಧಾರವಾಡ 

ಇದನ್ನೂ ಓದಿ.. ಕೊರೋನಾ ಪರಿಸ್ಥಿತಿಯಿಂದ ನಾಡಿನ ದೊರೆಗೆ ಕಂಟಕ; ಶ್ರೀಗಳ ಭವಿಷ್ಯವಾಣಿ 

 

Related posts