ಸಿಇಟಿ ಅನಿರ್ಧಿಷ್ಟಾವಧಿ ಮುಂದಕ್ಕೆ; ವಿದ್ಯಾರ್ಥಿಗಳಲ್ಲಿ ಮತ್ತೆ ಟೆನ್ಷನ್

ಬೆಂಗಳೂರು:  ಮುಂಬರುವ ಶೈಕ್ಷಣಿಕ ವರ್ಷ 2020-21ನೇ ಸಾಲಿನ ಇಂಜಿನಿಯರಿಂಗ್ ಸಹಿತ ವೃತ್ತಿಪರ ಶಿಕ್ಷಣ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ. ಕೊರೋನಾ ಕಾರಣಕ್ಕಾಗಿ ದೇಶವ್ಯಾಪಿ ಲಾಕ್ ಡೌನ್ ಜಾರಿಯಲ್ಲಿದ್ದು ಬಹುತೇಕ ಶೈಕ್ಷಣಿಕ ಪರೀಕ್ಷೆಗಳ ವೇಳಾಪಟ್ಟಿಯನ್ನು ರದ್ದುಪಡಿಸಲಾಗಿದೆ. ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಏಪ್ರಿಲ್ 22, 23ರಂದು ನಡೆಸಬೇಕಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯನ್ನು ನಿಗದಿಪಡಿಸಲಾಗಿತ್ತು ಇದೀಗ ಈ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

 ಇದನ್ನೂ ಓದಿ.. 
ರಾಜ್ಯದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗುತ್ತದೆಯೇ?

ಬೆಂಗಳೂರಿನಲ್ಲಿ ಸೋಮವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳ ಜತೆ ವೃತ್ತಿಪರ ಕೋರ್ಸ್’ಗಳ ಸಾಮಾನ್ಯ ಪ್ರವೇಶ ಪರೀಕ್ಷೆ ಕುರಿತಂತೆ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಮಾತುಕತೆ ನಡೆಸಿದರು. ಸದ್ಯಕ್ಕೆ ನಿಗದಿಯಾಗಿರುವ ದಿನಾಂಕವನ್ನು ರದ್ದುಪಡಿಸುವ ನಿರ್ಧಾರವನ್ನು ಈ ವೇಳೆ ಕೈಗೊಳ್ಳಲಾಯಿತು. ಆದರೆ ಮುಂದೆ ಯಾವಾಗ ಪರೀಕ್ಷೆ ನಡೆಸಬಹುದೆಂದು ಈಗಾಗಲೇ ನಿರ್ಧರಿಸಲು ಸಾಧ್ಯವಿಲ್ಲ. ಹಾಗಾಗಿ ಪರಿಸ್ಥಿತಿ ತಿಳಿಯಾದ ನಂತರ ದಿನಾಂಕ ನಿಗದಿಪಡಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಸಚಿವರು, ಕೋವಿಡ್-19 ಕಾರಣಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಇನ್ನೂ ಪೂರ್ಣ ವಾಗಿಲ್ಲ. ಅಲ್ಲದೆ ಸಹಜ ಸ್ಥಿತಿಯೂ ಇಲ್ಲ. ಹೀಗಾಗಿ ಸಿಇಟಿಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು. ಏಪ್ರಿಲ್ ಮೂರನೇ ವಾರದಲ್ಲಿ ಸಿಇಟಿ ಪರೀಕ್ಷೆಯ ದಿನಾಂಕವನ್ನು ಮತ್ತೆ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಇದನ್ನೂ ಓದಿ.. ಶುಲ್ಕ ಪಾವತಿ ವಿಚಾರ; ಖಾಸಗಿ ಶಾಲೆಗಳಿಗೆ ಸಚಿವ ಸುರೇಶ ಕುಮಾರ್ ಎಚ್ಚರಿಕೆಯ ಸಂದೇಶ

 

Related posts