ಮೊಬೈಲ್ ಗ್ರಾಹಕರಿಗೆ ಸಿಹಿ ಸುದ್ದಿ; ವಾಲಿಡಿಟಿ ಮುಗಿದರೂ ರೀಚಾರ್ಜ್ ಅಗತ್ಯವಿಲ್ಲ

ದೆಹಲಿ: ಕೊರೋನಾ ಸಂಕಟದಿಂದ ಬಳಲಿರುವ ಮಂದಿ ಇದೀಗ ಮತ್ತಷ್ಟು ನಿರಾಳ. ಈಗಾಗಲೇ ಕೇಂದ್ರ ಸರ್ಕಾರದ ಕೆಲವು ಕ್ರಮಗಳು ಜನರನ್ನು ನಿಟ್ಟುಸಿರು ಬಿಡುವಂತೆ ಮಾಡಿವೆ. ಬ್ಯಾಂಕ್ ಸಾಲದ ಕಂತು ಪಾವತಿಯಲ್ಲಿನ ವಿನಾಯಿತಿ, ಕರೆಂಟ್ ಬಿಲ್, ಮನೆ ಬಾಡಿಗೆ ವಿಚಾರದಲ್ಲಿನ ಸೂಚನೆಗಳ ನಂತರ ಇದೀಗ ಮೊಬೈಲ್ ಫೋನ್ ರೀಚಾರ್ಜ್ ವಿಚಾರದಲ್ಲೂ ಸಮಾಧಾನಕರ ನಿರ್ಧಾರವೊಂದು ಹೊರಬಿದ್ದಿದೆ.

ಮಹತ್ವದ ತೀರ್ಮಾನವೊಂದರಲ್ಲಿ ಸದ್ಯದ ಮಟ್ಟಿಗೆ ಮೊಬೈಲ್ ರೀಚಾರ್ಜ್ ಮಾಡದಿದ್ದರೂ ಸಂಪರ್ಕ ಕಡಿತ ಮಾಡಬಾರದೆಂದು ದೂರಸಂಪರ್ಕ ಕಂಪೆನಿಗಳಿಗೆ ಟ್ರಾಯ್ ನಿರ್ದೇಶನ ನೀಡಿದೆ.ಪ್ರಸ್ತುತ ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಇದರಿಂದಾಗಿ ಜನ ಉದ್ಯೋಗ ವಂಚಿತರಾಗಿದ್ದು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಹಾಗಾಗಿ ಏಪ್ರಿಲ್ ಅಂತ್ಯದವರೆಗೂ ಮೊಬೈಲ್ ರೀಚಾರ್ಜ್ ಮಾಡುವುದಕ್ಕೂ ವಿನಾಯಿತಿ ಸಿಕ್ಕಿದೆ.

 ಇದನ್ನೂ ಓದಿ.. 
ರಾಜ್ಯದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗುತ್ತದೆಯೇ?

ಟ್ರಾಯ್ ಸೂಚನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್, ತನ್ನ ಪ್ರಿಪೇಯ್ಡ್ ಬಳಕೆದಾರರ ಖಾತೆಗೆ 10 ರೂಪಾಯಿ ಇನ್ಸೆಂಟೀವ್ ನೀಡುವ ಜೊತೆಗೆ ಕರೆ ಸೌಲಭ್ಯವನ್ನು ವಿಸ್ತರಿಸಿದೆ. ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಟಾಕ್ಟೈಂ ಮತ್ತು ಸಿಮ್ ವ್ಯಾಲಿಡಿಟಿಯನ್ನು ಹೆಚ್ಚಿಸಲಾಗಿದೆ ಎಂದು ಬಿಎಸ್ಸೆನ್ನೆಲ್ ಹೇಳಿದೆ.

ಬಿಎಸ್ಎನ್ಎಲ್ ಸಂಸ್ಥೆಯು ಲಾಕ್ ಡೌನ್ ಘೋಷಣೆಗೂ ಮುನ್ನವೇ ಹೊಸ ಲ್ಯಾಂಡ್ ಲೈನ್ ಸಂಪರ್ಕ ಹೊಂದಿರುವ ಗ್ರಾಹಕರಿಗಾಗಿ ವರ್ಕ್ ಫ್ರಮ್ ಹೋಮ್ ಅನುಕೂಲವಾಗುವಂತೆ ವಿಶೇಷ ಇಂಟರ್ನೆಟ್ ಸೌಲಭ್ಯ ಪ್ರಕಟಿಸಿತ್ತು. ಇದೀಗ ಮೊಬೈಲ್ ಗ್ರಾಹಕರಿಗೆ ಸಿಮ್ ವಾಲಿಡಿಟಿ ವಿಸ್ತರಿಸಿ, ಕರೆ ಸೌಲಭ್ಯ ಹೆಚ್ಚಿಸಿ ಮತ್ತೊಂದು ಅರ್ಥಪೂರ್ಣ ಹೆಜ್ಜೆಯಿಟ್ಟಿದೆ.

ಇದೇ ವೇಳೆ, ಐಡಿಯಾ, ಜೆಯೋ, ಏರ್ಟೆಲ್ ಸಹಿತ ಇನ್ನುಳಿದ ಮೊಬೈಲ್ ಸಂಸ್ಥೆಗಳೂ ಇದೆ ರೀತಿ ಗ್ರಾಹಕ ಸ್ನೇಹೀ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುವುತ್ತಿವೆ.

ಇದನ್ನೂ ಓದಿ.. 
ಲಾಕ್ ಡೌನ್ ವಿಸ್ತರಣೆಯಾಗುತ್ತಾ? ಏನಿದು ಗೊಂದಲ: ಕೇಂದ್ರದ ಸ್ಪಷ್ಟನೆ ಏನು?

Related posts