ಅಂತೂ ಇಂತೂ ರಾಜ್ಯ ಸಾರಿಗೆ ಬಸ್ ಪ್ರಯಾಣ ದರ ಏರಿಕೆ

ಬೆಂಗಳೂರು: ಅಂತೂ ಇಂತೂ ರಾಜ್ಯ ಸಾರಿಗೆ ಬಸ್ ಪ್ರಯಾಣ ದರ ಏರಿಕೆಯಾಗಿದೆ. ಜನ ಸಾಮಾನ್ಯರ ಪಾಲಿಗೆ ಅಗತ್ಯ ಸೇವೆಗಳಲ್ಲಿ ಒಂದಾಗಿರು ಸಾರಿಗೆ ವ್ಯವಸ್ಥೆಯು ಖಾಸಗಿ ಕ್ಷೇತ್ರಕ್ಕಿಂತಲೂ ದುಬಾರಿಯಾಗಿರುವುದು ಅಚ್ಚರಿಯ ಸಂಗತಿ.

ಕೆಎಸ್ಸಾರ್ಟಿಸಿಯ ಮೂರು ನಿಗಮಗಳ ಬಸ್ ಪ್ರಯಾಣದರ ಏರಿಕೆ ಮಾಡಿ ಆದೇಶ ಪ್ರಕಟಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದ ಅನುಮತಿ ಸಿಗುತ್ತಿದ್ದಂತೆಯೇ ಸಾರಿಗೆ ಬಸ್ ಟಿಕೆಟ್ ದರದಲ್ಲಿ ಶೇಕಡಾ 12ರಷ್ಟು ಏರಿಕೆಯಾಗಿದೆ.

ಡೀಸೆಲ್ ದರ ಏರಿಕೆಯ ವಿಷಯವನ್ನು ಮುಂದಿಟ್ಟು ಈ ದರ ಏರಿಕೆಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಸುಗಳ ಟಿಕೆಟ್ ದರವನ್ನು ಪರಿಷ್ಕರಿಸಿಲ್ಲ.
ಈ ನಡುವೆ ಸರ್ಕಾರಿ ಸ್ವಾಮ್ಯದ ಬಸ್ ಗಳಲ್ಲಿನ ಪ್ರಯಾಣ ದರ ಏರಿಕೆಗೆ ಜನ ಸಾಮಾನ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

Related posts