ಈಶಾನ್ಯ ದೆಹಲಿಯಲ್ಲಿ ಕಂಡಲ್ಲಿ ಗುಂಡಿಗೆ ಆದೇಶ

ದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ನಂತರ ಇದೀಗ ದೇಶದಲ್ಲಿ ಪರಿಸ್ಥಿತಿ ನಿಯಂತ್ರಣ ವಿಚಾರ ಸವಾಲಾಗಿ ಪರಿಣಮಿಸಿದೆ. ದೆಹಲಿಯಲ್ಲಿ ಆಗಾಗ್ಗೆ ಪೌರತ್ವ ತಿದ್ದುಪಡಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಪ್ರತಿಭಟನೆಗಳು ಹಿಂಸಾಚಾರ ಭುಗಿಲೇಳುವಂತೆ ಮಾಡುತ್ತಿವೆ.

ಟ್ರಾಂಪ್ ಭಾರತ ಭೇಟಿ ವೇಳೆಯೂ ಪೌರತ್ವ ತಿದ್ದುಪಡಿ ವಿರೋಧಿ ಹೋರಾಟ ನಡೆದಿದೆ. ಅದರಲ್ಲೂ ಈ ಪ್ರತಿಭಟನೆ ೧೩ ಮಂದಿಯನ್ನು ಬಲಿತೆಗೆದುಕೊಂಡಿರುವುದು ದುರದೃಷ್ಟಕರ.
ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಪರ-ವಿರೋಧವಾಗಿ ಶನಿವಾರ ಭಾನುವಾರ ಆರಂಭಗೊಂಡ ಶಕ್ತಿ ಪ್ರದರ್ಶನಗಳ ಸರಣಿ ಮಂಗಳವಾರ ತೀವ್ರ ಸ್ವರೂಪ ತಾಳಿತು.

ಜಫ್ರಾಬಾದ್ ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರ ಪ್ರತಿಭಟನೆ ವೇಳೆ ಸರಣಿ ಹಿಂಸಾಚಾರ ನಡೆದಿದ್ದು ಪರಿಸ್ತಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ಸರಣಿ ಹಿಂಸಾಚಾರಗಳಲ್ಲಿ ೧೩ ಮಂದಿ ಸಾವನ್ನಪ್ಪಿದ್ದು 50 ಪೊಲೀಸರ ಸಹಿತ 180 ಮಂದಿ ಗಾಯಗೊಂಡಿದ್ದಾರೆ.

ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸುತ್ತಿದ್ದು, ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅಷ್ಟೇ ಅಲ್ಲ ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ.

Related posts