ಕೈಗಾರಿಕೆಗಳಷ್ಟೇ ಅಲ್ಲ, ಬಡ-ಮಾದ್ಯಮವರ್ಗಕ್ಕೂ ಕೊಡುಗೆ;  ‘ಮೋದಿ ಮನಿ’ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ..  

ದೆಹಲಿ: ಕೊರೋನಾ ಸಂಕಟ ಕಾಲದಲ್ಲಿ ದೇಶದ ಜನರ ನೆರವಿಗೆ ಧಾವಿಸಿರುವ ಮೋದಿ ಸರ್ಕಾರ,  20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆ.  ದೇಶದ ಆರ್ಥಿಕ ಪುನಶ್ಚೇತನ ಉದ್ದೇಶದಿಂದ   ಸಣ್ಣ ಉದ್ದಿಮೆದಾರರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ಪ್ರಕಟಿಸಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಸೀತಾರಾಮ್  ಸುದ್ದಿಗೋಷ್ಠಿ ಇಡೀ ದೇಶದ ಗಮನ ಸೆಳೆಯಿತು.

ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಜಾಮೀನು ರಹಿತ ಸಾಲ ನೀಡಲು 3 ಲಕ್ಷ ಕೋಟಿ ರೂಪಾಯಿ ಮೀಸಲಿರಿಸಲಾಗಿದೆ ಎಂದ ನಿರ್ಮಲಾ ಸೀತಾರಾಮನ್, ಈ ಸಾಲ ಮರುಪಾವತಿಗೆ 4 ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ ಎಂದರು. ಮೊದಲ 12 ತಿಂಗಳವರೆಗೆ ಸಾಲ ಮರುಪಾವತಿಸುವ ಅಗತ್ಯವಿಲ್ಲ. ಈ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ ಎಂದು ಅವರು ತಿಳಿಸಿದರು. ಜನ ಧನ ಖಾತೆ ಹೊಂದಿರುವ ಮಹಿಳೆಯರಿಗೆ ತಿಂಗಳಿಗೆ 500 ರೂಪಾಯಿಯಂತೆ ಮುಂದಿನ ಮೂರು ತಿಂಗಳು ಹಣ ಜಮಾ ಆಗಲಿದೆ ಎಂದೂ ಅವರು ಪ್ರಕಟಿಸಿದರು.

ನಿರ್ಮಲಾ ಸೀತಾರಾಮ್ ಅವರ ಸುದ್ದಿಗೋಷ್ಠಿಯ ಹೈಲೈಟ್ಸ್ ಇಲ್ಲಿದೆ.

  • ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಜಾಮೀನು ರಹಿತ ಸಾಲ ನೀಡಲು 3 ಲಕ್ಷ ಕೋಟಿ ರೂಪಾಯಿ ಮೀಸಲು
  • ಈ ಸಾಲ ಮರುಪಾವತಿಗೆ 4 ವರ್ಷಗಳವರೆಗೆ ಕಾಲಾವಕಾಶ
  • ಮೊದಲ 12 ತಿಂಗಳವರೆಗೆ ಸಾಲ ಮರುಪಾವತಿಸುವ ಅಗತ್ಯವಿಲ್ಲ.
  • ಈ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ
  • ಅಕ್ಟೋಬರ್ 31ರವರೆಗೆ ಕೈಗಾರಿಕೆಗು ಸಾಲ ಪಡೆಯಬಹುದು.
  • ಸಂಕಷ್ಟದಲ್ಲಿ ಇರುವ ಸಣ್ಣ ಕೈಗಾರಿಕೆಗಳಿಗೆ 20 ಸಾವಿರ ಕೋಟಿ ರೂಪಾಯಿ ಸಹಾಯಕ ಸಾಲ
  • ಜನ ಧನ ಖಾತೆ ಹೊಂದಿರುವ ಮಹಿಳೆಯರಿಗೆ ತಿಂಗಳಿಗೆ 500 ರೂಪಾಯಿಯಂತೆ ಮುಂದಿನ ಮೂರು ತಿಂಗಳು ಹಣ ಜಮಾ
  • ಸುಮಾರು 41 ಕೋಟಿ ರೂಪಾಯಿ ಜನಧನ್ ಖಾತೆಗಳಿಗೆ ಜಮಾ
  • ಸಣ್ಣ ಕೈಗಾರಿಕೆಗಳು ಉದ್ಯೋಗಿಗಳಿಗೆ ಸಂಬಳ ನೀಡಲು ಹಣ ಇಲ್ಲದಿದ್ದರೆ ಕೇಂದ್ರ ಸರ್ಕಾರ ನೆರವು
  • ಮೂರು ತಿಂಗಳವರೆಗೆ ಎಟಿಎಂಗಳಲ್ಲಿ ಹಣ ಪಡೆಯಲು ಯಾವುದೇ ಶುಲ್ಕ ಇಲ್ಲ
  • ಮುಂದಿನ ಮೂರು ತಿಂಗಳುಗಳು 80 ಕೋಟಿ ಜನರಿಗೆ ಉಚಿತವಾಗಿ ಐದು ಕೆಜಿ ಅಕ್ಕಿ ಅಥವಾ ಗೋಧಿ ನೀಡಲಾಗುವುದು.
  • ಎಲ್ಲ ಕುಟುಂಬದವರಿಗೆ ಮೂರು ತಿಂಗಳ ಕಾಲ ಒಂದು ಕೆಜಿ ಧವಸ-ಧಾನ್ಯ ಉಚಿತವಾಗಿ ನೀಡಲಾಗುವುದು.
  • ಮುಂದಿನ ಮೂರು ತಿಂಗಳು 8 ಕೋಟಿ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ನೀಡಲಾಗುವುದು.
  • ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್.
  • 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಆದಾಯ ತೆರಿಗೆ ಇಲಾಖೆ ವಾಪಸ್
  • ಇದರಿಂದ 14 ಕೋಟಿ ಆದಾಯ ತೆರಿಗೆದಾರರಿಗೆ ಅನುಕೂಲ
  • ಆದಾಯ ತೆರಿಗೆ ಮರುಪಾವತಿ ದಿನಾಂಕ ಡಿಸೆಂಬರ್​ವರೆಗೆ ಮುಂದೂಡಿಕೆ
  • ವ್ಯಾಪಾರಿಗಳು, ಕಾರ್ಮಿಕರಿಗೆ ಇಪಿಎಫ್ ಮೂಲಕ 2500 ಕೋಟಿ ರೂಪಾಯಿ ನೆರವು
  • 15 ಸಾವಿರಕ್ಕೂ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ತಕ್ಷಣ ಪಿಎಫ್​ ಹಣ ಪಾವತಿ.
  • ಪ್ರತಿ ತಿಂಗಳು 15,000ಕ್ಕೂ ಅಧಿಕ ಸಂಬಳ ಪಡೆಯುವ ನೌಕರರ ಕಂಪೆನಿ ಪಿಎಫ್​ ಪಾಲು ಶೇ. 12ರಿಂದ ಶೇ. 10ಕ್ಕೆ ಇಳಿಕೆ
  • ಇದಕ್ಕಾಗಿ 6,750 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.
  • ಜೂನ್, ಜುಲೈ, ಆಗಸ್ಟ್​ ತಿಂಗಳವರೆಗೆ ಪಿಎಫ್​ ಹಣ ಸರ್ಕಾರದಿಂದಲೇ ಪಾವತಿ
  • ಕಂಪನಿ ಮತ್ತು ನೌಕರರ ಪಾಲಿನ ಪಿಎಫ್​ ಹಣವನ್ನು ಸರ್ಕಾರವೇ ಭರಿಸಲಿದೆ.  

ಇದನ್ನೂ ಓದಿ.. ಮಂಗಳೂರಿನಲ್ಲಿ ಅನಿವಾಸಿ ಭಾರತೀಯರ ತಂಡ ; ಏರ್ಪೋರ್ಟ್’ನಿಂದ ನೇರ ಕ್ವಾರಂಟೈನ್’ಗೆ

 

Related posts