ಬೆಂಗಳೂರು, ಬೆಳಗಾವಿಯಲ್ಲಿ ಮತ್ತೆ 6 ಕೇಸ್; ದಕ್ಷಿಣಕನ್ನಡದಲ್ಲೂ ಕೊರೋನಾ ರಣಕೇಕೆ

ಬೆಂಗಳೂರು. ರಾಜ್ಯದಲ್ಲಿ ಕೊರೋನಾ ವೈರಸ್’ನ ರಣಕೇಕೆ ಮುಂದುವರಿದಿದೆ. ಲಾಕ್’ ಡೌನ್ ಜಾರಿಯಲ್ಲಿದ್ದರೂ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇವೆ.

ಶನಿವಾರ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಹೊರಬರುವ ಹೊತ್ತಿಗೆ 15 ಹೊಸ ಪ್ರಕರಣಗಳು ಸೇರಿಕೊಂಡಿವೆ. ಶುಕ್ರವಾರ ಸಂಜೆಯಿಂದ ಶನಿವಾರ ಮಧ್ಯಾಹ್ನ ನಡುವೆ 15ಮಂದಿಯಲ್ಲಿ ಕೋವಿಡ್-೧೯ ವೈರಾಣು ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತನ್ನ ಈ ಹೆಲ್ತ್ ಬುಲೆಟಿನ್’ನಲ್ಲಿ ಹೇಳಿದೆ.

ಬೆಂಗಳೂರು ನಗರವೊಂದರಲ್ಲೇ ಹೊಸದಾಗಿ ಆರು ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದ್ದು, ಈ ಪೈಕಿ ಐವರು ಬಿಹಾರ ಟ್ರಾವೆಲ್ ಹಿಸ್ಟರಿ ಹೊಂದಿದ್ದ ಕೊರೋನಾ ಸೋಂಕಿತರ ಸಂಪರ್ಕದಲ್ಲಿದ್ದವರು. ಮತ್ತೊಬ್ಬರು ಬಿಬಿಎಂಪಿ ಕಂಟೈನ್ಮೆಂಟ್ ಪ್ರದೇಶದಲ್ಲಿ ವರದಿಗಾಗಿ ಭೇಟಿ ನೀಡಿದ ವ್ಯಕ್ತಿಯಾಗಿದ್ದಾರೆಂದು ಆರೋಗ್ಯ ಇಲಾಖೆ ಹೇಳಿದೆ.

ಬೆಳಗಾವಿಯ ಹಿರೇಬಾಗೇವಾಡಿಯಲ್ಲೂ ಆರು ಮಂದಿಯಲ್ಲಿ ಸೋಂಕು ಕಂಡುಬಂದಿದೆ.

ದಕ್ಷಿಣಕನ್ನಡದಲ್ಲೂ ಒಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಕೆಲ ದಿನಗಳ ಹಿಂದೆ ಸೋಂಕಿಗೊಳಗಾಗಿ ಮೃತಪಟ್ಟ ಮಹಿಳೆಯ ಸಂಪರ್ಕದಲ್ಲಿದ್ದಾಗ ಅವರ ಮಗಳಿಗೆ ವೈರಾಣು ಹರಡಿರಬಹುದು ಎಂದು ಹೇಳಲಾಗುತ್ತಿದೆ.

ಮಂಡ್ಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಒಂದೊಂದು ಕೇಸ್ ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಈ ವರೆಗೆ ಒಟ್ಟು 489 ಮಂದಿಗೆ ಸೋಂಕು ತಗುಲಿದ್ದು ಈ ಪೈಕಿ 153 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆಂದು ಆರೋಗ್ಯ ಇಲಾಖೆ ಈ ಬುಲೆಟಿನ್’ನಲ್ಲಿ  ಮಾಹಿತಿ ನೀಡಿದೆ.

ಇದನ್ನೂ ಓದಿ.. ಚೀನಾಕ್ಕೆ ಸೆಡ್ಡು ಹೊಡೆದ ಭಾರತ; TikTok ಬದಲಿಗೆ ಬಂದೇ ಬಂತು ‘MITRAN’ App

 

Related posts