ರಾಜ್ಯದಲ್ಲಿ ಮತ್ತೆ 9 ಹೊಸ ಕೊರೋನಾ ಸೋಂಕು

ಬೆಂಗಳೂರು: ಚೀನೀ ವೈರಾಣು ಕೊರೋನಾ ಜಗತ್ತಿನಾದ್ಯಂತ ಕರಾಳತೆಯನ್ನು ಪ್ರದರ್ಶಿಸುತ್ತಿವೆ. ಇತ್ತ ಭಾರತದಲ್ಲೂ ಕಬಂಧ ಬಾಹುಗಳನ್ನು ಚಾಚುತ್ತಿರುವ ವೈರಸ್ ಕರ್ನಾಟಕದಲ್ಲೂ ಸೋಂಕಿನ ವೆಗವನ್ನು ಹೆಚ್ಚಿಸಿದೆ.

ಬುಧವಾರ ಮಧ್ಯಾಹ್ನದ ಹೊತ್ತಿಗೆ ಕಳೆದ 24 ತಾಸುಗಳ ಪರಿಸ್ತಿಯತ್ತ ಬೆಳಕು ಚೆಲ್ಲಿದ ಆರೋಗ್ಯ ಇಲಾಖೆ 9 ಹೊಸ ಪ್ರಕರಣಗಳನ್ನು ಪಟ್ಟಿಮಾಡಿದೆ.
ಮಂಗಳವಾರ ಸಂಜೆ ನಂತರ ಬುಧವಾರ ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಮತ್ತೆ 9 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಹೇಳಿದೆ.

ಇದನ್ನೂ ಓದಿ.. ಡೋಂಟ್ ವರಿ.. ಜುಲೈ 31ರ ವರೆಗೂ ವರ್ಕ್ ಫ್ರಮ್ ಹೋಮ್

ಕಲಬುರಗಿ ಜಿಲ್ಲೆಯಲ್ಲಿಯೇ ಮತ್ತೆ 8 ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿವೆ. ಮೂವರು ಪುರುಷರಲ್ಲಿ ಹಾಗೂ ಐವರು ಮಹಿಳೆಯರಲ್ಲಿ ಹೊಸದಾಗಿ ಈ ಸೋಂಕಿನ ಪ್ರಕರಣ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖಾ ಮಾಹಿತಿ ಹೇಳುತ್ತಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ 12 ವರ್ಷದ ಗಂಡು ಮಗುವಿನಲ್ಲಿ ಸೋಂಕು ದೃಢಪಟ್ಟಿದೆ.

ಇದನ್ನೂ ಓದಿ.. ಗಲ್ಫ್ ರಾಷ್ಟ್ರಗಳಲ್ಲಿ ಹಿಂದೂ ಉದ್ಯೋಗಿಗಳು ಟಾರ್ಗೆಟ್.. ಯಾಕಂತೀರಾ?

ರಾಜ್ಯದಲ್ಲಿ ಕೊರೋನಾ ಪ್ರಭಾವ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆಯಾಗಿದೆ. ಈ ನಡುವೆ ಕೊರೋನಾ ಸೋಂಕಿತರ ಪೈಕಿ ಈವರೆಗೆ 215 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆಂದು ಸರ್ಕಾರ ತಿಳಿಸಿದೆ.

 

ಇದನ್ನೂ ಓದಿ.. ರಕ್ಷಣಾ ಕ್ಷೇತ್ರಕ್ಕೂ ಕೊರೋನಾ ಲಗ್ಗೆ; ಒಬ್ಬ ಯೋಧ ಸಾವು; ಹಲವರಲ್ಲಿ ಸೋಂಕು

 

Related posts