ದೇಶಾದ್ಯಂತ 1 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ; ಬಲಿಯಾದವರು 3000ಕ್ಕೂ ಹೆಚ್ಚು ಮಂದಿ

ದೆಹಲಿ: ನಿಲ್ಲದ ನೋವು, ನಿಲ್ಲದ ಸಾವು ಭಾರತೀಯರನ್ನೂ ಕಂಗಾಲಾಗಿಸಿದೆ. ದೇಶದಲ್ಲೂ ಕೊರೋನಾ ಮರಣ ಮೃದಂಗ ಮುಂದುವರಿದಿದ್ದು ಸೋಂಕಿತರ ಸಂಖ್ಯೆ ನಿತ್ಯವೂ ಹೆಚ್ಚಾಗುತ್ತಲೆ ಇದೆ. ಮಹಾರಾಷ್ಟ್ರ ರಾಜ್ಯದಲ್ಲಂತೂ ಈ ಸಂಖ್ಯೆ ಅತಿಯಾಗಿ ಹೆಚ್ಚತ್ತಿದೆ. ಈ ರಾಜ್ಯದಲ್ಲಿ ಸೋಮವಾರ ಒಂದೇ ದಿನ 5,242 ಹೊಸ ಪ್ರಕರಣಗಳು ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ಅಂದರೆ 35,000ಕ್ಕಿಂತ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ತಮಿಳುನಾಡಿನಲ್ಲೂ 11,760 ಮಂದಿ ಸೋಂಕಿತರಾಗಿದ್ದಾರೆ.

ಪ್ರಧಾನಿ ಮೋದಿ ತವರು ಗುಜರಾತಿನಲ್ಲೂ 11,746 ಪ್ರಕರಣಗಳು ಪಾಸಿಟಿವ್ ಕೇಸ್’ಗಳು ಸವಾಲೆಂಬಂತಿವೆ. ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದ್ದು, ಮುಂದೇನು ಎಂಬ ಚಿಂತೆ ಕಾಡತೊಡಗಿದೆ.

ಲಾಕ್’ಡೌನ್ ಸಡಿಲಿಕೆಯಾಗಿದೆ ಎಂದು ಜನ ನಿರಾಳರಾಗುತ್ತಿದ್ದಂತೆಯೇ ಸೋಂಕಿನಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಆಸ್ಪತ್ರೆ ಪಾಲಾಗಿರುವವರ ಪೈಕಿ ಹಲವರ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ಅದಾಗಲೇ ವಿವಿಧ ರಾಜ್ಯಗಳಲ್ಲಿ ಕೋವಿಡ್-೧೯ ಸೋಂಕಿಗೊಳಗಾಗಿ ಸಾವನ್ನಪ್ಪಿದವರ ಸಂಖ್ಯೆ 3000 ದಾಟಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಮಹಾರಾಷ್ಟ್ರದಲ್ಲಿ 1,249 ಜನರು ಮೃತಪಟ್ಟರೆ, ಗುಜರಾತ್ ನಲ್ಲಿ ಕೋವಿಡ್ 19 ಗೆ ಬಲಿಯಾದವರ ಸಂಖ್ಯೆ 694 ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲೂ 81 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ.. ಕಣ್ಸನ್ನೆ ಬೆಡಗಿ ಗುಡ್ ಬೈ? ನಟಿಯನ್ನು ಕಾಡಿದವರು ಯಾರು ಗೊತ್ತಾ?

 

Related posts