ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸುನಿಲ್ ಜೋಶಿ

ದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಕನ್ನಡಿಗ ಸುನಿಲ್ ಜೋಶಿಗೆ ಉನ್ನತ ಸ್ಥಾನ ಲಭಿಸಿದೆ. ಬಿಸಿಸಿಐನ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದಾರೆ. ಈ ವರೆಗೂ ಎಂಎಸ್ ಕೆ ಪ್ರಸಾದ್ ಅವರು ಆ ಸ್ಥಾನದಲ್ಲಿದ್ದರು.

ರುದ್ರ ಪ್ರತಾಪ್, ಮದನ್ ಲಾಲ್, ಸುಲಕ್ಷಣ ನಾಯಕ್ ಅವರನ್ನೊಳಗೊಂಡ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯ ಶಿಫಾರಸು ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನ ಸುನೀಲ್ ಜೋಶಿ ಅವರಿಗೆ ಸಿಕ್ಕಿದೆ. ಹರ್ವೀಂದರ್ ಸಿಂಗ್, ಸರಣ್ ದೀಪ್ ಸಿಂಗ್, ಜತಿನ್, ದೇವಾಂಗ್ ಗಾಂಧಿ ಮೊದಲಾದವರು ಈ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದಾರೆ.

Related posts