ಕನ್ನಡ ಸೀರಿಯಲ್ ಶೂಟಿಂಗ್’ಗೆ ಬ್ರೇಕ್

ಬೆಂಗಳೂರು: ಕೊರೋನಾ ಮಾರಕ ಸೋಂಕಿನ ಕಾರಣಕ್ಕಾಗಿ ಬೆಂಗಳೂರು ಸ್ತಬ್ಧವಾಗಿದೆ. ಬೆಂಗಳೂರಷ್ಟೇ ಅಲ್ಲ ಮೈಸೂರು, ಮಂಗಳೂರು ಸಹಿತ ಹಲವು ನಗರಗಳೂ ನಲುಗಿವೆ. ಮಾಲ್’ಗಳು, ಸಿನಿಮಾ ಮಂದಿರಗಳು ಬಂದ್ ಆಗಿವೆ. ಇದೀಗ ಸಿನಿಮಾ ಮಂದಿರಗಳಷ್ಟೇ ಅಲ್ಲ ಕಿರುತೆರೆಗೂ ಈ ಕೊರೋನಾ ಬಿಸಿ ತಟ್ಟಿದೆ.

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕಿರುತೆರೆ ಧಾರಾವಾಹಿಗಳ ಚಿತ್ರೀಕರಣ ಸ್ಥಗಿತಕ್ಕೆ ತೀರ್ಮಾನಿಸಲಾಗಿದೆ. ಮಾರ್ಚ್ ಅಂತ್ಯದವರೆಗೆ ಟಿವಿ ಸೀರಿಯಲ್’ಗಳ ಚಿತ್ರೀಕರಣ ಬಂದ್ ಆಗಲಿದೆ.

ಮಹಾರಾಷ್ಟ್ರ ಸಹಿತ ಅನೇಕ ರಾಜ್ಯಗಳಲ್ಲಿ ಸಿನಿಮಾ ಹಾಗೂ ಕಿರುತೆರೆ ಧಾರಾವಾಹಿಗಳ ಶೂಟಿಂಗ್ ಸ್ತಬ್ಧಗೊಂಡಿವೆ. ಹಿಂದಿ ಧಾರಾವಾಹಿಗಳ ಶೂಟಿಂಗ್ ಸ್ಥಗಿತವಾಗಿದೆ. ಅದೇ ರೀತಿ ಮಾರ್ಚ್ 31ರವರೆಗೆ ಕನ್ನಡದ ಎಲ್ಲಾ ಧಾರಾವಾಹಿಗಳ ಶೂಟಿಂಗ್ ಸ್ಥಗಿತಗೊಳಿಸಲು ಕರ್ನಾಟಕ ಟಿವಿ ಅಸೋಸಿಯೇಷನ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ .

Related posts