ಚಾಲೆಂಜಿಂಗ್ ಸ್ಟಾರ್ ದರ್ಶನ್’ಗೆ ಸುಮಲತಾ ರಾಜಮಾತೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಂದು ಚಾಲೆಂಜಿಂಗ್ ಪಾತ್ರ ಒಪ್ಪಿದ್ದಾರೆ. ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ರಾಯಣ್ಣನಾಗಿ. ಕುರುಕ್ಷೇತ್ರದಲ್ಲಿ ದುರ್ಯೋಧನನಗಾಗಿ ಕಂಡ ಈ ದಾಸ, ಈಗ ರಾಜವೀರ ಮದಕರಿನಾಯಕನಾಗಿ ತೆರೆ ಮೇಲೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ.

ರಾಜವೀರ ಮದಕರಿಯ ರಾಜಮಾತೆ ಆಗಿ ಸಂಸದೆ ಸುಮಲತಾ ಅಭಿನಯಿಸ್ತಿದ್ದಾರೆ. ರಾಕ್ ಲೈನ್ ಪ್ರೋಡಕ್ಷನ್ ಅಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ, ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದು, ಆನ್ ಸ್ಕ್ರೀನ್ ನಲ್ಲಿ ವೀರಮದಕರಿಯ ಅಮ್ಮನಾಗಿ ಸುಮಲತಾ ನಟಿಸುತ್ತಿದ್ದಾರೆ.

ವೀರ ಮದಕರಿ ನಾಯಕನ ಕಥೆ ಮೇಲೆ ಸಿಕ್ಕಾಪಟ್ಟೆ ವರ್ಕೌಟ್ ಆಗಿದೆ. . ರೈಟರ್ ಬಿ.ಎಲ್.ವೇಣು ಬರೆದ ಕಾದಂಬರಿ ಆಧರಿಸಿದ ಈ ಚಿತ್ರದ ಕಥೆಗೆ, ಹಿರಿಯ ನಟ ಶ್ರೀನಿವಾಸ್ ಮೂರ್ತಿ,ದೊಡ್ಡಣ್ಣ ಅವ್ರು ರೈಟರ್ ಬಿ.ಎಲ್.ವೇಣು ಜೊತೆಗೆ ಕಥೆಗೂ ಕುಳಿತಿದ್ದರು.ಈ ಹಿರಿಯರೆಲ್ಲ ಸೇರಿ ಈಗ ಕಥೆ ಫೈನಲ್ ಮಾಡಿದ್ದಾರೆ.

ವೀರ ಮದಕರಿ ನಾಯಕ ಚಿತ್ರ ಬೆಂಗಳೂರು, ಜಸ್ತಾನ್,ಮುಂಬೈ,ಹೈದ್ರಾಬಾದ್ ಅಲ್ಲೂ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರದ ಬಗ್ಗೆ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಮಾಹಿತಿ ಹಂಚಿಕೊಂಡಿದ್ದಾರೆ.

Related posts