ಖ್ಯಾತ ಟೆನಿಸ್ ಆಟಗಾರ ಥಾಮಸ್ ಬೆರ್ಡಿಚ್ ವೃತ್ತಿ ಜೀವನಕ್ಕೆ ವಿದಾಯ

ಖ್ಯಾತ ಟೆನಿಸ್ ಆಟಗಾರ ಥಾಮಸ್ ಬೆರ್ಡಿಚ್ ವೃತ್ತಿ ಜೀವನಕ್ಕೆ ವಿದಾಯ

ಲಂಡನ್: ಖ್ಯಾತ ಟೆನಿಸ್ ಆಟಗಾರ ಥಾಮಸ್ ಬೆರ್ಡಿಚ್ ಅವರು ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಜೆಕ್ ಗಣರಾಜ್ಯದ ಮಾಜಿ ಅಗ್ರ ಶ್ರೇಯಾಂಕಿತ ಆಟಗಾರ ತಮ್ಮ ವೃತ್ತಿ ಜೀವನದಲ್ಲಿ 13 ಬಾರಿ ಎಟಿಪಿ ಫೈನಲ್ಸ್ ಚಾಂಪಿಯನ್ ಆಗಿದ್ದಾರೆ.

2010ರಲ್ಲಿ ವಿಂಬಲ್ಡನ್ ಚಾಂಪಿಯನ್‍ಶಿಪ್ ನಲ್ಲಿ ಕ್ವಾರ್ಟರ್ ಫೈನಲ್ಸ್ ಹಣಾಹಣಿಯಲ್ಲಿ ರೋಜರ್ ಫೆಡರರ್ ಅವರನ್ನು ಥಾಮಸ್, ಮಣಿಸಿದ್ದರು. ನಂತರ, ಸೆಮಿಫೈನಲ್ಸ್ ಪಂದ್ಯದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ವಿರುದ್ಧ ಗೆಲುವು ಪಡೆದಿದ್ದರು. ಆದರೆ ಫೈನಲ್ ತಲುಪಿದ್ದ ಥಾಮಸ್, ಸ್ಪೇನ್ ನ ರಫೆಲ್ ನಡಾಲ್ ವಿರುದ್ಧ ಪ್ರಶಸ್ತಿ ಸುತ್ತಿನಲ್ಲಿ ಸೋಲು ಅನಿಭವಿಸಿದ್ದರು.
2015 ರಲ್ಲಿಎಟಿಪಿ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು ಇವರ ವೃತ್ತಿಬದುಕಿನ ಅತ್ಯುನ್ನತ ಶ್ರೇಯಾಂಕವಾಗಿದೆ.

ಥಾಮಸ್ ಬೆರ್ಡಿಚ್ ಅವರು ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ತಂದಿದೆ.

Uncategorized

Related posts