ಎಟಿಪಿ: ಏಳನೇ ಬಾರಿ ಪ್ರಶಸ್ತಿ ಗೆಲ್ಲುವ ಫೆಡರರ್ ಕನಸು ಭಗ್ನ

ಲಂಡನ್: ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಹಣಾಹಣಿಯಲ್ಲಿ ಗ್ರೀಕ್ ನ ಸ್ಟಿಫನೋಸ್ ಸಿಟ್ಸಿಪಸ್ ವಿರುದ್ಧ ಸೋಲು ಅನುಭವಿಸುವ ಮೂಲಕ ಎಟಿಪಿಯ ಏಳನೇ ಬಾರಿ ಪ್ರಶಸ್ತಿ ಗೆಲ್ಲುವ ಫೆಡರರ್ ಕನಸು ಭಗ್ನವಾಗಿದೆ. .
ಲಂಡನ್ ನಲ್ಲಿ ನಡೆಯುತ್ತಿರುವ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಹಣಾಹಣಿಯಲ್ಲಿ ಗ್ರೀಕ್ ನ ಸ್ಟಿಫನೋಸ್ ಸಿಟ್ಸಿಪಸ್ ವಿರುದ್ಧ ರೋಜರ್ ಫೆಡರರ್ ಸೋಲು ಅನುಭವಿಸಿದರು.

ಶನಿವಾರ ನಡೆದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಗ್ರೀಕ್ ಆಟಗಾರ ಸಿಟ್ಸಿಪಸ್ ಅವರು ರೋಜರ್ ಫೆಡರರ್ ವಿರುದ್ಧ 6-3, 6-4 ಅಂತರದ ನೇರ ಸೆಟ್‍ಗಳಲ್ಲಿ ವಿಜಯಿಯಾದರು. 20 ಬಾರಿ ಗ್ರ್ಯಾನ್ ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ವಿರುದ್ಧ ಗೆದ್ದ ಅವರು ಫೈನಲ್ ತಲುಪಿದರು.
ಎಟಿಪಿ ಫೈನಲ್ ಪಂದ್ಯದಲ್ಲಿ ಸಿಟ್ಸಿಪಸ್ ಅವರು ಡೊಮಿನಿಚ್ ವಿರುದ್ಧ ಸೆಣಸಲಿದ್ದಾರೆ.

Related posts