ವಡೋದರಾ ಬಳಿ ಅಪಘಾತ ; 12 ಮಂದಿ ಸಾವು

ವಡೋದರಾ: ಗುಜರಾತ್ ರಾಜ್ಯದ ಮಹುವದ್ ಎಂಬಲ್ಲಿ  ಟ್ರಕ್ ಮತ್ತು ಟೆಂಪೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪಿದವರ ಸಂಖ್ಯೆ  12ಕ್ಕೇರಿದೆ.  ವಡೋದರಾ ಜಿಲ್ಲೆಯ ಮಹುವದ್ ಬಳಿ ಶನಿವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಹಲವಾರು ಸ್ಥಳದಲ್ಲೇ ಸಾವನ್ನಪಿದರೆ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಈ ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊನು ಆಸ್ಪತ್ರಗೆ ದಾಖಲಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ವಡೋದರಾ ಜಿಲ್ಲಾ ಎಸ್ಪಿ   ಸುಧೀರ್ ದೇಶಾಯಿ, ಗಾಯಾಳುಗಳನ್ನು  ವಡೋದರಾದ ಎಸ್ ಎಸ್ ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Related posts