ದೂರವಾಗದ ವಾಟ್ಸ್‌ಆ್ಯಪ್‌ ಆತಂಕ ; ಕೇಂದ್ರದಿಂದ ಎಚ್ಚರಿಕೆಯ ಸಂದೇಶ

ದೆಹಲಿ: ಜನ ಸಾಮಾನ್ಯರ ದಿನದ ಅಗತ್ಯದ ಸಂಗತಿಗಳಿಗಿಂತಲೂ ತೀರಾ ಸಮೀಪ ಸಂಗಾತಿಯಂತಿರುವ ವಾಟ್ಸ್‌ಆ್ಯಪ್‌ ಎಷ್ಟು ಸೇಫ್ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.  ವಾಟ್ಸ್‌ಆ್ಯಪ್‌ ಗ್ರಾಹಕರು ಮತ್ತೂಮ್ಮೆ ವೈರಸ್‌ ದಾಳಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ ಅಪ್ ಗ್ರೇಡ್ ಗೆ ಸಲಹೆ ಕೇಳಿ ಬಂದಿದೆ.

ಕೆಲ ಸಮಯದ ಹಿಂದೆ ವಾಟ್ಸ್‌ಆ್ಯಪ್‌ ಹ್ಯಾಕ್ ಮಾಡಿರುವ ವರದಿ ಪ್ರಪಂಚದಾದ್ಯಂತ ವಾಟ್ಸ್‌ಆ್ಯಪ್‌ ಬಲಕೆದಾರರನ್ನು ಆತಂಕಕ್ಕೀಡುಮಾಡಿತ್ತು, ಈ ವಾಟ್ಸ್‌ಆ್ಯಪ್‌ ನಿಂದ ದೇಶದ ಭದ್ರತೆಗೂ ಆತಂಕ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ, ವಾಟ್ಸ್‌ ಆ್ಯಪ್‌ನ ಎಲ್ಲಾ ಗ್ರಾಹಕರೂ, ಆ ಆ್ಯಪ್‌ ಅನ್ನು ಅಪ್‌ಗ್ರೇಡ್‌ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ‘ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌-ಇಂಡಿಯಾ’ (ಸಿಇಆರ್‌ಟಿ-ಇನ್‌) ನೀಡಿರುವ ಈ ಎಚ್ಚರಿಕೆಯನ್ನು ಜನ ನಿರ್ಲಕ್ಷಿಸುವಂತಿಲ್ಲ ಎಂದು ತಜ್ಞರು ಕೂಡಾ ಪ್ರತಿಪಾದಿಸಿದ್ದಾರೆ.

ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌-ಇಂಡಿಯಾ ಸಂಸ್ಥೆಯು ಆನ್‌ಲೈನ್‌ ಮೂಲಕ ಆಗುವ ಹ್ಯಾಕಿಂಗ್‌, ಫಿಶಿಂಗ್‌ ಮುಂತಾದ ಅಪಾಯಗಳನ್ನು ನಿಭಾಯಿಸುವ ನೋಡಲ್‌ ಸಂಸ್ಥೆಯಾಗಿದೆ. ವಾಟ್ಸ್ ಆ್ಯಪ್‌ ಬಳಸುವ ಎಲ್ಲಾ ಗ್ರಾಹಕರ ಮೊಬೈಲಿಗೆ ಬರುತ್ತಿರುವ ಎಂಪಿ 4 ಮಾದರಿಯ ವಿಡಿಯೋ ಕ್ಲಿಪಿಂಗ್‌ ಒಂದರ ಮೂಲಕ ಅಜ್ಞಾತ ಸ್ಥಳದಲ್ಲಿರುವ ಹ್ಯಾಕರ್‌ಗಳು, ವೈರಸ್‌ಗಳನ್ನು ಹರಿಬಿಡುತ್ತಿದ್ದಾರೆಂದು ವಾಟ್ಸ್‌ ಆ್ಯಪ್‌ ಸಂಸ್ಥೆ ಎಚ್ಚರಿಕೆ ನೀಡಿತ್ತು. ಇವಿಷ್ಟೇ ಅಲ್ಲ ಅಂತರ್ಜಾಲ ಮೂಲಕ ಹ್ಯಾಕರ್ಸ್ ತಮಗೆ ಬೇಕಾದಂತೆ ತಂತ್ರಜ್ಞಾನವನ್ನು ಅಪಬಳಕೆ ಮಾಡುತ್ತಿರುವುದರಿಂದಾಗಿ ಈ ಅಪ್ಡೇಷನ್ ಅಗತ್ಯವಿದೆ ಎಂದು ಸಿಇಆರ್‌ಟಿ-ಇನ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

Related posts