ಬೆಳ್ಳೂರು ಕ್ರಾಸ್ ಬಳಿ ಅಪಘಾತ; ರಿಯಾಲಿಟಿ ಷೋ ವಿನ್ನರ್ ಸಾವು

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವಿಜೇತೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಸ್ಪರ್ಧೆಯ ವಿಜೇತೆ ಮೆಬಿನಾ ಮೈಕಲ್ ಇನ್ನಿಲ್ಲ. ಚೆನ್ನರಾಯಪಟ್ಟಣ ಸಮೀಪದ ಬೆಳ್ಳೂರು ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ವರ್ಷಗಳ ಹಿಂದೆ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಎಂಬ ರಿಯಾಲಿಟಿ ಶೋ ವೀಕ್ಷಕ ಕೋಟಿಯ ಗಮನ ಸೆಳೆದಿತ್ತು. ಮನೆಮಾತಾಗಿದ್ದ ಈ ರಿಯಾಲಿಟಿ ಶೋನಲ್ಲಿ ಕೊಡಗು ಮೂಲದ ತಾರೆ ಮೆಬಿನಾ ಮೈಕಲ್ ಚಾಂಪಿಯನ್ ಆಗಿ ಹೊಹೊಮ್ಮಿದ್ದರು.

ಸೋಮವಾರಪೇಟೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿ ಅವರು ದುರ್ಮರಣಕ್ಕೀಡಾಗಿದ್ದಾರೆ ಎನ್ನಲಾಗಿದೆ.

ಸುವರ್ಣ ಕಿಡಿ…ಮಡಿಕೇರಿಯ ಕುಡಿ…ಆಕಸ್ಮಿಕವಾಗಿ ಅಗಲಿದ ಸುವರ್ಣ ಬಂಧು, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ವಿಜೇತೆ ಮೆಬಿನಾಗೆ ಭಾವಪೂರ್ಣ ವಿದಾಯ.. #StarSuvarna #RIP #MebienaMichael

Posted by Star Suvarna on Tuesday, 26 May 2020

ಇದನ್ನೂ ಓದಿ.. ಜೂನ್ 1ರಿಂದ ಕೋರ್ಟ್ ಕಲಾಪ; ವಕೀಲರಿಗೂ ಷರತ್ತು

Related posts