ಭಾರತ-ಚೀನಾ ಗಡಿ ವಿವಾದ; ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದ ಟ್ರಂಪ್

ದೆಹಲಿ: ಲಡಾಖ್ ಗಡಿಯಲ್ಲಿನ ಚೀನಾದ ಮೊಂಡಾಟ ವಿಚಾರ ಅಮೆರಿಕಾದಲ್ಲಿ ಪ್ರತಿಧ್ವನಿಸಿದೆ. ಲಡಾಖ್’ನಲ್ಲಿರುವ ಭಾರತದ ಭೂಭಾಗ ಪ್ರವೇಶಿಸುವ ಚೀನಾದ ಯತ್ನಕ್ಕೆ ಭಾರತ ತಿರುಗೇಟು ನೀಡಿದ್ದು, ಚೀನಾದ ಪ್ರಯತ್ನವೂ ವಿಫಲವಾಗುತ್ತಿದೆ. ಈ ನಡುವೆ ಭಾರತ ಮತ್ತು ಚೀನಾ ಗಡಿ ವಿವಾದ ಬಗೆಹರಿಸುವ ಸಂಬಂಧ ತಾವು ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಭಾರತ-ಚೀನಾ ನಡುವಿನ ಗಡಿ ವಿವಾದ ಇತ್ಯರ್ಥ ಸಂಬಂಧ ಮಧ್ಯಸ್ಥಿಕೆ ವಹಿಸಲು ಅಮೇರಿಕ ಸಿದ್ಧವಿದೆ ಎಂದು ಭಾರತ ಮತ್ತು ಚೀನಾ ರಾಷ್ಟ್ರಗಳಿಗೆ ಸಂದೇಶ ರವಾನಿಸಿದ್ದಾರೆ. We have informed both India and China that the United States is ready, willing and able to mediate or arbitrate their now raging border dispute. Thank you! —…

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ದ ವಿಧಾನಸೌಧ ಠಾಣೆಯಲ್ಲಿ ದೂರು

ಬೆಂಗಳೂರು: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ರಾಜ್ಯದ ಆಡಳಿತಾರೂಢ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ಕಾಂಗ್ರೇಸ್ ಮುಖಂಡ ಐವನ್ ಡಿಸೋಜಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ರಾಷ್ಟ್ರೀಯ ವಿಪತ್ತು ಕಾಯ್ದೆ ಉಲ್ಲಂಘನೆ ಮಾಡಿದ ಆರೋಪ, ಸಾರ್ವಜನಿಕವಾಗಿ ಸುಳ್ಳು ಹೇಳಿಕೆ ಮತ್ತು ದಾರಿ ತಪ್ಪಿಸಿದ ಆರೋಪ ಕುರಿತಂತೆ ಐವನ್ ಡಿಸೋಜಾ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಧಾನ ಮಂತ್ರಿಯಿಂದ ನಾವು ಕೋವಿಡ್ 19 ನಿಂದ ಬದುಕುಳಿದಿದ್ದೆವೆ ಅಂದರೆ ಸಾವಿರಾರು ಮಂದಿ ಸಾವನ್ನಪ್ಪಿರುವುದಕ್ಕೆ ಪಿಎಂ ಜವಾಬ್ದಾರಿಯಲ್ಲವೇ. ಅವರು ಮುಂಜಾಗೃತ ಕ್ರಮ ತೆಗದುಕೊಳ್ಳದಿದ್ದಕ್ಕೆ ಜವಾಬ್ದಾರಿ ಆಗಬೇಕಲ್ಲವೇ? ಎಂದು ಐವನ್ ಡಿಸೋಜಾ ಪ್ರಶ್ನಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಸಮಿತಿ ಅಧ್ಯಕ್ಷರ ಸ್ಥಾನವು ರೋಟೆಷನ್ ಮಾದರಿಯ ಹುದ್ದೆಯಾಗಿದೆ. ಆದರೆ ಸಂಸತ್ ಸದಸ್ಯರು ಇದನ್ನು ಭಾರತ ಕೋವಿಡ್ 19ರಲ್ಲಿ ಸಾಧಿಸಿದ ಸಾಧನೆಗಾಗಿಯೇ ನೀಡಿದ್ದಾಗಿರುತ್ತದೆ ಎಂದು ಬಿಂಬಿಸುವ ಕೆಲಸವನ್ನು ನಳೀನ್ ಮಾಡಿದ್ದಾರೆಂದು ಐವನ್ ಡಿಸೋಜಾ ಆರೋಪ…

ಚೀನಾವನ್ನು ಓಲೈಸಲು ಮೋದಿ ಸರ್ಕಾರವನ್ನು ತೆಗಳಿದ ಪಾಕ್ ಪಿಎಂ ಇಮ್ರಾನ್

ದೆಹಲಿ: ಲಡಾಖ್ ಗಡಿ ವಿಚಾರದಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮೂಗು ತೋರಿಸುವ ಪ್ರಯತ್ನಕ್ಕಿಳಿದಿದೆ. ಭಾರತ ತನ್ನ ನೆರೆರಾಷ್ಟ್ರಗಳಿಗೆ ಬೆದರಿಕೆ ಹಾಕಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಲಡಾಖ್‌ನಲ್ಲಿನ ಭಾರತ-ಚೀನಾ ಗಡಿರೇಖೆ ವಿಚಾರ ಮುಂದಿಟ್ಟು ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ಭಾರತವನ್ನು ಕೆಣಕುವ ಪ್ರಯತ್ನಕ್ಕಿಳಿದಿದ್ದಾರೆ. ಹಿಂದುತ್ವ ಅಧಿಪತ್ಯದ ಮೋದಿ ಸರ್ಕಾರವು ನಾಜಿಯ ಲೆಬೆನ್ಸ್‌ರಾಮ್ -ಲಿವಿಂಗ್ ಸ್ಪೇಸ್ ಗೆ ಹೋಲುವ ರೀತಿ ಸೊಕ್ಕಿನ ನೀತಿ ಮೂಲಕ ನೆರೆ ರಾಷ್ಟ್ರಗಳಿಗೆ ಬೆದರಿಕೆ ಹಾಕುತ್ತಿದೆ ಎಂದು ಈ ಟ್ವೀಟ್’ನಲ್ಲಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಲಡಾಕ್‌ನ ಸರೋವರವಾದ ಪಂಗೊಂಗ್ ತ್ಸೊ ಗಡಿಭಾಗದಲ್ಲಿ ಚೀನಾ ಸೇನೆ ಜಮಾಯಿಸಿದ ಬಳಿಕ ಅಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಈ ಸಂದರ್ಭದಲ್ಲಿ ಭಾರತವನ್ನು ತೆಗಳಿ ಚೀನಾವನ್ನು ಓಲೈಸುವ ಪ್ರಯತ್ನದ ಭಾಗವಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ಟ್ವೀಟ್ ಮಾಡಿದಂತಿದೆ. ಇದನ್ನೂ ಓದಿ.. ಗಡಿ ವಿವಾದ;…

ಯುವಜನರ ಸಬಲೀಕರಣಕ್ಕೆ ಮುನ್ನುಡಿ ಬರೆದ ಸೊಸೈಟಿ: ಕರಾವಳಿ ಮೂಲದ ಉದ್ಯಮಿಯ ಸಾಹಸಗಾಥೆ..

ಉಡುಪಿ: ಸಾಧಿಸುವ ಛಲವಿದ್ದರೆ ಎಂತಹಾ ಸಮುದ್ರದಲೆಗೂ ಎದುರಾಗಿ ಈಜಬಹುದಂತೆ. ಅದೇ ರೀತಿಯ ಛಲಗಾರನೊಬ್ಬ ಕಟ್ಟಿದ ಸೊಸೈಟಿಯೊಂದು ಇದೀಗ ಸಾವಿರಾರು ಜನರ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದಿದೆ. ಇದು ಅಪರೂಪದಲ್ಲಿ ಅಪರೂಪದ ಸಾಧನೆಯಾದರೂ ಇಂದು ಸಾವಿರಾರು ಕುಟುಂಬಗಳು ಈ ಸೊಸೈಟಿಯ ಸಾರಥಿಯ ಸಹಾಯವನ್ನು ನೆನಯುತ್ತಿದೆ. ಹೌದು, ಸುಮಾರು ಐದು ವರ್ಷಗಳ ಹಿಂದೆ ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕರಾವಳಿಯ ಬಡ ಜನರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿದ್ದವು. ಕರಾವಳಿಯಲ್ಲಿ ಮೀನುಗಾರರು, ಬೀಡಿ ಕಾರ್ಮಿಕರು ಹಾಗೂ ಬಡ ಕೂಲಿಕಾರ್ಮಿಕರೇ ಹೆಚ್ಚಾಗಿದ್ದು, ಇವರಲ್ಲಿ ಆದಾಯವನ್ನು ನಿಗದಿಪಡಿಸಲು ಮಾನದಂಡವಿರಲಿಲ್ಲ. ಆದಾಯದ ಮೂಲವಿಲ್ಲದಿದ್ದರೆ ಬ್ಯಾಂಕ್ ಕೂಡಾ ಸಾಲ ನೀಡುವುದಿಲ್ಲ. ಈ ಬಡಪಾಯಿ ಮಂದಿ ಬ್ಯಾಂಕುಗಳತ್ತ ಮುಖಮಾಡಿದರೆ ಹಣದ ನೆರವು ಸಿಗುತ್ತಿರಲಿಲ್ಲ. ಬದಲಾಗಿ ಅವಮಾನ ಎದುರಾಗುತ್ತಿತ್ತು. ಈ ಬಡಪಾಯಿ ಮಂದಿಯ ಪರಿಸ್ಥಿತಿಯನ್ನು ಅರಿತ ಉದ್ಯಮಿ ಗೋವಿಂದ ಬಾಬು ಪೂಜಾರಿಯವರು ತಾವೇ ಒಂದು ಕ್ರೆಡಿಟ್ ಕೋ-ಆಪರೇಟಿವ್…

ಗಡಿ ವಿವಾದ; ಭಾರತ ಜೊತೆ ಮಾತುಕತೆಗೆ ಸಿದ್ದ ಎಂದ ಚೀನಾ

ದೆಹಲಿ: ಭಾರತ ಚೀನಾ ಗಾಡಿಯಲ್ಲಿ ಪರಿಸ್ಥಿತಿ ಸ್ಥಿರ ಮತ್ತು ನಿಯಂತ್ರಣದಲ್ಲಿದ್ದು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ನಾವು ಸಿದ್ದ ಎಂದು ಚೀನಾ ಹೇಳಿಕೊಂಡಿದೆ. ಉಭಯ ದೇಶಗಳು ಸಮಸ್ಯೆಯನ್ನು ಮಾತುಕತೆ ಮೂಲಕ ಬಬಯಸಿಕೊಳ್ಳೋಣ ಎಂಬ ಸಂದೇಶವನ್ನು ಚೀನಾ ರವಾನಿಸಿದೆ. ಚೀನಾ ವಿದೇಶಾಂಗ ಸಚಿವ ಜಾವೋ ಲಿಜಿಯಾನ್ ಈ ಸಂಬಂಧ ಹೇಳಿಕೆಯೊಂದನ್ನು ನೀಡಿದ್ದು, ಗಡಿ ವಿಚಾರದಲ್ಲಿ ಚೀನಾದ ನಿಲುವುಗಳ ಸ್ಪಷ್ಟವಾಗಿವೆ. ನಮ್ಮ ಸುರಕ್ಷತೆಯನ್ನು ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ, ಸ್ಥಿರತೆಯನ್ನು ಕಾಪಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಗಡಿ ಸಮಸ್ಯೆ ಬಗ್ಗೆ ಉಭಯ ದೇಶಗಳು ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ.. ಮನೆ ಖರೀದಿಸುವರಿಗೆ ಸಿಹಿ ಸುದ್ದಿ; ಸರ್ಕಾರದ ತೀರ್ಮಾನಕ್ಕೆ ಜನ ಫುಲ್ ಖುಷ್  

ಕೊರೋನಾ ರೌದ್ರಾವತಾರ; ರಾಜ್ಯದಲ್ಲಿ ಮತ್ತೆ 122 ಹೊಸ ಕೇಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ರೌದ್ರಾವತಾರ ಮುಂದುವರಿದಿದೆ. ಕರ್ನಾಟಕದಲ್ಲಿ ಒಂದೇ ದಿನದಲ್ಲಿ 122 ಹೊಸ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 2405ಕ್ಕೆ ಏರಿಕೆಯಾಗಿದ್ದು ಕೊರೋನಾ ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ ಕೂಡಾ 45ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ.. ಮನೆ ಖರೀದಿಸುವರಿಗೆ ಸಿಹಿ ಸುದ್ದಿ; ಸರ್ಕಾರದ ತೀರ್ಮಾನಕ್ಕೆ ಜನ ಫುಲ್ ಖುಷ್ ಮಂಗಳವಾರ ಸಂಜೆಯಿಂದ ಇಂದು ಮಧ್ಯಾಹ್ನವರೆಗಿನ ಕೊರೋನಾ ಬೆಳವಣಿಗೆಗಳನ್ನಾಧರಿಸಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ 122 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ ಎಂದು ಹೇಳಿದೆ. ಕಲಬುರ್ಗಿ – 28 ಹೊಸ ಕೇಸ್ ಯಾದಗಿರಿ – 16 ಹೊಸ ಕೇಸ್ ಹಾಸನ-14 ಹೊಸ ಕೇಸ್ ಬೀದರ್-12 ಹೊಸ ಕೇಸ್ ದಕ್ಷಿಣ ಕನ್ನಡ – 11 ಹೊಸ ಕೇಸ್ ಉಡುಪಿ-09 ಹೊಸ ಕೇಸ್ ಉತ್ತರ…

ಒಂದೇ ದಿನ 1 ಲಕ್ಷ ಕೊರೋನಾ ಸೋಂಕಿತರು; ಹೆಚ್ಚಿದ ಸಾವಿವ ಸಂಖ್ಯೆ

ದೆಹಲಿ: ಕೆಂಪು ರಾಷ್ಟ್ರ ಚೀನಾದಲ್ಲಿ ಸೃಷ್ಟಿಯಾಗಿ ಪ್ರಪಂಚ ಪರ್ಯಟನೆ ಕೈಗೊಂಡಿರುವ ಕಿಲ್ಲರ್ ಕೊರೋನಾ ವೈರಾಣು ಮರಣ ಮೃದಂಗವನ್ನೇ ಭಾರಿಸುತ್ತಿದೆ. ಇಡೀ ವಿಶ್ವವೇ ಆತಂಕದ ಮಡುವಿನಲ್ಲಿ ಬಿದ್ದಿದ್ದು, ವಿಶ್ವದಾದ್ಯಂತ ಸುಮಾರು ಮೂರೂವರೆ ಲಕ್ಷ ಮಂದಿ ಪಾಲಿಗೆ ಕೋವಿಡ್-19 ವೈರಾಣು ಯಮದೂತನಾಗಿ ಬಂದೆರಗಿದೆ. ಒಂದು ಅಂಕಿ ಅಂಶ ಪ್ರಕಾರ ಜಗತ್ತಿನೆಲ್ಲೆಡೆ ಸೋಂಕಿತರ ಸಂಖ್ಯೆ 55 ಲಕ್ಷ ಸಮೀಪಿಸುತ್ತಿದ್ದು, ಈವರೆಗೆ ಸುಮಾರು 3 ಲಕ್ಷ 43 ಸಾವಿರ ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ. ಮಂಗಳವಾರ ಒಂದೇ ದಿನ ಸುಮಾರು 99,780 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ ಅಮೆರಿಕಾದಲ್ಲಿಯೇ 143,739 ಮಂದಿಯನ್ನು ಕೊರೋನಾ ಬಲಿತೆಗೆದುಕೊಂಡಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಸರಾಸರಿ 1100 ಕ್ಕೂ ಹೆಚ್ಚು ಮಂದಿ ಅಮೆರಿಕಾದಲ್ಲಿ ಬಲಿಯಾಗುತ್ತಿದ್ದರೆಂ ದು ಅಂದಾಜಿಸಲಾಗಿದೆ. ಬ್ರಿಟನ್’ನಲ್ಲಿ 37,130 ಮಂದಿ ಕಿಲ್ಲರ್ ಕೊರೋನಾ ಹಾವಳಿಯಿಂದಾಗಿ ಅಸುನೀಗಿದ್ದಾರೆ. ಇಟಲಿಯಲ್ಲಿ 32,955 , ಫ್ರಾನ್ಸ್’ನಲ್ಲಿ 28,533, ಸ್ಪೇನ್’ನಲ್ಲಿ…

ಮನೆ ಖರೀದಿಸುವರಿಗೆ ಸಿಹಿ ಸುದ್ದಿ; ಸರ್ಕಾರದ ತೀರ್ಮಾನಕ್ಕೆ ಜನ ಫುಲ್ ಖುಷ್

ಬೆಂಗಳೂರು: ಬದುಕಿದ್ದಾಗ ಮನೆ ಮಾಡಲೇಬೇಕು ಎಂಬುದು ಎಲ್ಲರ ಆಸೆ ಮತ್ತು ಆಶಯ. ಇದೀಗ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿದ್ದು, ಮನೆ ಮಾಡೋದು ಕನಸಿನ ಮಾತು ಅಂದುಕೊಂಡವರೇ ಹೆಚ್ಚು ಮಂದಿ. ಇಂತಹಾ ಸಂದರ್ಭದಲ್ಲಿ ರಾಜ್ಯದ ಬಿ.ಎಸ್.ವೈ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಪ್ರಕಟಿಸಿದೆ. ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಮನೆಗಳು ಸಿಗುವಂತೆ ಮಾಡಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಖರೀದಿದಾರರಿಗೆ ಅನುಕೂಲವಂತೆ 35 ಲಕ್ಷದವರೆಗಿನ ಹೊಸ ಅಪಾರ್ಟ್ ಮೆಂಟ್ ಗಳ ಮುದ್ರಾಂಕ ಶುಲ್ಕವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಮೊದಲ ಬಾರಿಗೆ ದಾಖಲಾತಿ ಮಾಡಿಕೊಳ್ಳುವ 20 ಲಕ್ಷಕ್ಕಿಂತ ಕಡಿಮೆ ವೆಚ್ಚದ ಅಪಾರ್ಟ್ ಮೆಂಟ್ ಗಳ ಮುದ್ರಾಂಕ ಶುಲ್ಕ ಶೇಕಡಾ 5ರಿಂದ ಶೇಕಡಾ 2ಕ್ಕೆ ಇಳಿಕೆಯಾಗಲಿದೆ. ಇದನ್ನೂ ಓದಿ.. ಬೆಳ್ಳೂರು ಕ್ರಾಸ್ ಬಳಿ ಅಪಘಾತ; ರಿಯಾಲಿಟಿ ಷೋ ವಿನ್ನರ್ ಸಾವು 21 ಲಕ್ಷದಿಂದ 35 ಲಕ್ಷದವರೆಗಿನ ಅಪಾರ್ಟ್ ಮೆಂಟ್ ಗಳ ಮುದ್ರಾಂಕ ಶುಲ್ಕವೂ ಶೇಕಡಾ 5ರಿಂದ…

ಜೂನ್ 1ರಿಂದ ಕೋರ್ಟ್ ಕಲಾಪ; ವಕೀಲರಿಗೂ ಷರತ್ತು

ಕೊರೋನಾ ಕಾರಣಕ್ಕಾಗಿ ಲಾಕ್‌ಡೌನ್ ಜಾರಿಯಾದ ನಂತರ ಕೋರ್ಟ್ ಕಲಾಪಗಳೂ ಏರುಪೇರಾಗಿದೆ. ಇದೀಗ ಪರಿಸ್ಥಿತಿ ಚೇತರಿಕೆಯಾಗಲೆಂಬ ಕಾರಣಕ್ಕಾಗಿ ವ್ಯಾಪಾರ ವಹಿವಟು ಆರಂಭಕ್ಕೆ ಭಾಗಶಃ ಅನುಮತಿ ಸಿಕ್ಕಿದೆ. ಆದರೆ ಕೋರ್ಟ್ ಕಲಾಪಗಳು ಆರಂಭವಾಗಿಲ್ಲ. ಈ ವರೆಗೂ ಸ್ಥಗಿತಗೊಂಡಿದ್ದ ನ್ಯಾಯಾಲಯ ಕಲಾಪಗಳು ಜೂನ್ 1ರಿಂದ ಆರಂಭವಾಗಲಿದೆ. ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪ ಸಂಬಂಧ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ಈ ಮಾರ್ಗಸೂಚಿಯ ಪ್ರಮುಖ ಅಂಶ ಹೀಗಿದೆ. ಪ್ರತಿ ದಿನ ಬೆಳಿಗ್ಗೆ 10, ಮಧ್ಯಾಹ್ನ ನಂತರ 10 ಪ್ರಕರಣಗಳ ವಿಚಾರಣೆ ನಡೆಯಲಿದೆ. ಪ್ರತಿ ಕೋರ್ಟ್ ಹಾಲ್‌ನಲ್ಲಿ 20ಕ್ಕಿಂತ ಹೆಚ್ಚು ವಕೀಲರು, ಸಿಬ್ಬಂದಿ ಇರುವಂತಿಲ್ಲ. ಅದಕ್ಕಿಂತ ಹೆಚ್ಚು ಮಂದಿ ಇದ್ದರೆ ಕಲಾಪ ಸ್ಥಗಿತಗೊಳಿಸಬೇಕಾಗುತ್ತದೆ. ಮೊದಲೆರಡು ವಾರ ಸಾಕ್ಷ್ಯ ವಿಚಾರಣೆಗೆ ಅವಕಾಶವಿಲ್ಲ. ವಕೀಲರ ವಾದ ಮಂಡನೆಗಷ್ಟೇ ಅವಕಾಶ. ಕೋರ್ಟ್‌ಗಳಿಗೆ ಕಕ್ಷಿಗಳ ಪ್ರವೇಶಕ್ಕೂ ನಿರ್ಬಂಧವಿರಲಿದೆ. ಕೋರ್ಟ್‌ಗೆ ಆಗಮಿಸುವ ವಕೀಲರು ಹೊರದೇಶ, ಹೊರ ರಾಜ್ಯ ಅಥವಾ ನಿರ್ಬಂಧಿತ…

ಬೆಳ್ಳೂರು ಕ್ರಾಸ್ ಬಳಿ ಅಪಘಾತ; ರಿಯಾಲಿಟಿ ಷೋ ವಿನ್ನರ್ ಸಾವು

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವಿಜೇತೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಸ್ಪರ್ಧೆಯ ವಿಜೇತೆ ಮೆಬಿನಾ ಮೈಕಲ್ ಇನ್ನಿಲ್ಲ. ಚೆನ್ನರಾಯಪಟ್ಟಣ ಸಮೀಪದ ಬೆಳ್ಳೂರು ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವರ್ಷಗಳ ಹಿಂದೆ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಎಂಬ ರಿಯಾಲಿಟಿ ಶೋ ವೀಕ್ಷಕ ಕೋಟಿಯ ಗಮನ ಸೆಳೆದಿತ್ತು. ಮನೆಮಾತಾಗಿದ್ದ ಈ ರಿಯಾಲಿಟಿ ಶೋನಲ್ಲಿ ಕೊಡಗು ಮೂಲದ ತಾರೆ ಮೆಬಿನಾ ಮೈಕಲ್ ಚಾಂಪಿಯನ್ ಆಗಿ ಹೊಹೊಮ್ಮಿದ್ದರು. ಸೋಮವಾರಪೇಟೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿ ಅವರು ದುರ್ಮರಣಕ್ಕೀಡಾಗಿದ್ದಾರೆ ಎನ್ನಲಾಗಿದೆ. https://www.facebook.com/StarSuvarna/photos/pb.276881659043324.-2207520000../3183212828410178/?type=3&theater ಇದನ್ನೂ ಓದಿ.. ಜೂನ್ 1ರಿಂದ ಕೋರ್ಟ್ ಕಲಾಪ; ವಕೀಲರಿಗೂ ಷರತ್ತು