ಮನೆ ಖರೀದಿಸುವರಿಗೆ ಸಿಹಿ ಸುದ್ದಿ; ಸರ್ಕಾರದ ತೀರ್ಮಾನಕ್ಕೆ ಜನ ಫುಲ್ ಖುಷ್

ಬೆಂಗಳೂರು: ಬದುಕಿದ್ದಾಗ ಮನೆ ಮಾಡಲೇಬೇಕು ಎಂಬುದು ಎಲ್ಲರ ಆಸೆ ಮತ್ತು ಆಶಯ. ಇದೀಗ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿದ್ದು, ಮನೆ ಮಾಡೋದು ಕನಸಿನ ಮಾತು ಅಂದುಕೊಂಡವರೇ ಹೆಚ್ಚು ಮಂದಿ. ಇಂತಹಾ ಸಂದರ್ಭದಲ್ಲಿ ರಾಜ್ಯದ ಬಿ.ಎಸ್.ವೈ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಪ್ರಕಟಿಸಿದೆ.

ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಮನೆಗಳು ಸಿಗುವಂತೆ ಮಾಡಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಖರೀದಿದಾರರಿಗೆ ಅನುಕೂಲವಂತೆ 35 ಲಕ್ಷದವರೆಗಿನ ಹೊಸ ಅಪಾರ್ಟ್ ಮೆಂಟ್ ಗಳ ಮುದ್ರಾಂಕ ಶುಲ್ಕವನ್ನು ಕಡಿತಗೊಳಿಸಲು ನಿರ್ಧರಿಸಿದೆ.
ಮೊದಲ ಬಾರಿಗೆ ದಾಖಲಾತಿ ಮಾಡಿಕೊಳ್ಳುವ 20 ಲಕ್ಷಕ್ಕಿಂತ ಕಡಿಮೆ ವೆಚ್ಚದ ಅಪಾರ್ಟ್ ಮೆಂಟ್ ಗಳ ಮುದ್ರಾಂಕ ಶುಲ್ಕ ಶೇಕಡಾ 5ರಿಂದ ಶೇಕಡಾ 2ಕ್ಕೆ ಇಳಿಕೆಯಾಗಲಿದೆ.

ಇದನ್ನೂ ಓದಿ.. ಬೆಳ್ಳೂರು ಕ್ರಾಸ್ ಬಳಿ ಅಪಘಾತ; ರಿಯಾಲಿಟಿ ಷೋ ವಿನ್ನರ್ ಸಾವು

21 ಲಕ್ಷದಿಂದ 35 ಲಕ್ಷದವರೆಗಿನ ಅಪಾರ್ಟ್ ಮೆಂಟ್ ಗಳ ಮುದ್ರಾಂಕ ಶುಲ್ಕವೂ ಶೇಕಡಾ 5ರಿಂದ ಶೇಕಡಾ 3ಕ್ಕೆ ಇಳಿಯಲಿದೆ.
ಈ ಸಂಬಂಧ ಮುದ್ರಾಂಕ ಮತ್ತು ದಾಖಲಾತಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಸಂಬಂಧ ಶೀಘ್ರ ಕ್ರಮಕ್ಕೆ ಸೂಚಿಸಿದ್ದಾರೆ. ಈ ಕ್ರಮದಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು ಮೂರೂವರೆ ಸಾವಿರ ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ.. ಜೂನ್ 1ರಿಂದ ಕೋರ್ಟ್ ಕಲಾಪ; ವಕೀಲರಿಗೂ ಷರತ್ತು

 

Related posts