ಗಡಿ ವಿವಾದ; ಭಾರತ ಜೊತೆ ಮಾತುಕತೆಗೆ ಸಿದ್ದ ಎಂದ ಚೀನಾ

ದೆಹಲಿ: ಭಾರತ ಚೀನಾ ಗಾಡಿಯಲ್ಲಿ ಪರಿಸ್ಥಿತಿ ಸ್ಥಿರ ಮತ್ತು ನಿಯಂತ್ರಣದಲ್ಲಿದ್ದು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ನಾವು ಸಿದ್ದ ಎಂದು ಚೀನಾ ಹೇಳಿಕೊಂಡಿದೆ. ಉಭಯ ದೇಶಗಳು ಸಮಸ್ಯೆಯನ್ನು ಮಾತುಕತೆ ಮೂಲಕ ಬಬಯಸಿಕೊಳ್ಳೋಣ ಎಂಬ ಸಂದೇಶವನ್ನು ಚೀನಾ ರವಾನಿಸಿದೆ.

ಚೀನಾ ವಿದೇಶಾಂಗ ಸಚಿವ ಜಾವೋ ಲಿಜಿಯಾನ್ ಈ ಸಂಬಂಧ ಹೇಳಿಕೆಯೊಂದನ್ನು ನೀಡಿದ್ದು, ಗಡಿ ವಿಚಾರದಲ್ಲಿ ಚೀನಾದ ನಿಲುವುಗಳ ಸ್ಪಷ್ಟವಾಗಿವೆ. ನಮ್ಮ ಸುರಕ್ಷತೆಯನ್ನು ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ, ಸ್ಥಿರತೆಯನ್ನು ಕಾಪಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಗಡಿ ಸಮಸ್ಯೆ ಬಗ್ಗೆ ಉಭಯ ದೇಶಗಳು ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ.. ಮನೆ ಖರೀದಿಸುವರಿಗೆ ಸಿಹಿ ಸುದ್ದಿ; ಸರ್ಕಾರದ ತೀರ್ಮಾನಕ್ಕೆ ಜನ ಫುಲ್ ಖುಷ್

 

Related posts