ಅನುಷ್ಕಾ ಶೆಟ್ಟಿಯ ಸಂಬಾವನೆ ಎಷ್ಟು ಗೊತ್ತಾ? ಕೇಳಿದರೆ ದಂಗಾಗ್ತೀರಿ

ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡತಿ ಅನುಷ್ಕಾ ಶೆಟ್ಟಿಯ ಸಂಬಾವನೆ ಎಷ್ಟು ಗೊತ್ತಾ? ಕೇಳಿದರೆ ನಿಜಕ್ಕೂ ದಂಗಾಗ್ತೀರಿ. ಒಂದು ಸಿನಿಮಾಗೆ ಅವರು ಪಡೆಯುತ್ತಿರುವ ಸಂಬಾವನೆ ಬರೋಬ್ಬರಿ ಎರಡೂವರೆ ಕೋಟಿ ರೂಪಾಯಿಗಳು ಎಂದು ಹೇಳುತ್ತಿವೆ ತೆಲುಗು ಚಿತ್ರರಂಗದ ಮೂಲಗಳು.

ಹೌದು, ಬಾಹುಬಲಿ ಯಶಸ್ಸಿನ ನಂತರ ಅನುಷ್ಕಾ ಶೆಟ್ಟಿಗೆ ಬೇಡಿಕೆ ಹೆಚ್ಚಾಗಿದ್ದರೂ ಅವರು ಸೆಲೆಕ್ಟ್ ಮಾಡುತ್ತಿರುವ ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯದ್ದು. ಕಳೆದೆರಡು ವರ್ಷಗಳಲ್ಲಿ ಅವರ ಚಿತ್ರ ತೆರೆ ಕಂಡಿಲ್ಲ. ಆದರೆ ಇದೀಗ ಬಿಡುಗಡೆಗೆ ಸಜ್ಜಾಗಿರುವ ‘ನಿಶ್ಯಬ್ದಂ’ ಚಿತ್ರಕ್ಕೆ ಅನುಷ್ಕಾ ಶೆಟ್ಟಿ ಎರಡೂವರೆ ಕೋಟಿ ರೂಪಾಯಿ ಸಂಬಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಹುಬಲಿ ನಂತರ ಅನೇಕ ಚಿತ್ರಗಳಲ್ಲಿ ಅವಕಾಶ ಹುಡುಕುತ್ತಾ ಬಂದರೂ ಅನುಷ್ಕಾ ಶೆಟ್ಟಿ ಯಾವುದೇ ಚಿತ್ರಕ್ಕೆ ತಕ್ಷಣವೇ ಒಪ್ಪಿಗೆ ಸೂಚಿಸಿಲ್ಲ. ಆದರೆ  ‘ನಿಶ್ಯಬ್ದಂ’ ಚಿತ್ರವನ್ನು ಅವರು ಒಪ್ಪಿಲೊಂದರು.  ಮೂಗಿಯ ಪಾತ್ರವನ್ನು ಚೆನ್ನಾಗಿಯೇ ಅವರು ನಿರ್ವಹಿಸಿದ್ದಾರೆ.  ಈ ಮೂಗಿಯ ಪಾತ್ರಕ್ಕೆ ಇಷ್ಟೊದು ಭಾರೀ ಮೊತ್ತದ ಸಂಭಾವನೆಯೇ ಎಂಬ ಚರ್ಚೆ ಸಾಗಿದೆ. ಅಷ್ಟೇ ಅಲ್ಲ ದಕ್ಷಿಣ ಭಾರತದ ಅಭಿನೇತ್ರಿಯರ ಪೈಕಿ ಇಷ್ಟೊನು ಮೊತ್ತದ ಸಂಭಾವನೆಯನ್ನು ಯಾವ ನಟಿಯೂ ಪಡೆದಿಲ್ಲವಂತೆ.

Related posts