ಡೋಂಟ್ ವರಿ.. ಪರೀಕ್ಷೆ ಇಲ್ಲದೆಯೇ ವಿದ್ಯಾರ್ಥಿಗಳು ಪಾಸ್..

ದೆಹಲಿ: ಮಾರಣಾಂತಿಕ ರೋಗ ಹಬ್ಬುತ್ತಿರುವ ಕೊರೋನಾದಿಂದಾಗಿ ಇಡೀ ವ್ಯವಸ್ಥೆಯೇ ಕುಸಿದು ಬಿದ್ದಿದೆ. ಚೀನಾದಲ್ಲಿ ಜನ್ಮ ತಾಳಿರುವ ಕೊರೋನಾ ಇದೀಗ ಇಡೀ ಜಗತ್ತನ್ನೇ ಆವರಿಸಿಕೊಂಡಿದೆ. ಭಾರತದಲ್ಲೂ ಕೊರೋನಾ ಮರಣ ಮೃದಂಗ ಭಾರಿಸುತ್ತಿದ್ದು ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಅಂತಿಮ ಪರೀಕ್ಷೆಗೆ ಮುನ್ನವೇ ರಜೆ ಘೋಷಿಸಿದ್ದರಿಂದಾಗಿ ಮಕ್ಕಳು ಹಾಗೂ ಪೋಷಕರಲ್ಲಿ ಗೊಂದಲ ಉಂಟಾಗಿತ್ತು.

ಈ ನಡುವೆ 2019-200 ಶೈಕ್ಷಣಿಕ ವರ್ಷದ ಪರೀಕ್ಷೆ ನಡೆಸದೆ 1 ರಿಂದ 8ನೇ ತರಗತಿವರೆಗಿನ ಮಕ್ಕಳನ್ನು ಮುಂದಿನ ದರ್ಜೆಗೆ ತೇರ್ಗಡೆ ಮಾಡುವಂತೆ ಕೇಂದ್ರ ಸರ್ಕಾರ ಸಿಬಿಎಸ್‌ಇಗೆ ನಿರ್ದೇಶನ ನೀಡಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವ ಪೋಖ್ರಿಯಾಲ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಹೆಚ್.ಆರ್.ಡಿ. ಸಚಿವಾಲಯದ ಸೂಚನೆ ನಂತರ ಇದೀಗ ಮಕ್ಕಳ ರಿಸಲ್ಟ್ ಬಗ್ಗೆ ಇದ್ದ ಗೊಂದಲ ಬಗೆಹರಿದಂತಾಗಿದೆ.

ಆದರೆ 9ರಿಂದ 11ನೇ ತರಗತಿವರೆಗಿನ ವಿದ್ಯಾರ್ಥಿಗಳ ರಿಸಲ್ಟ್ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಈ ವರೆಗೂ ನಡೆಸಲಾದ ಶಾಲಾ ಆಧಾರಿತ ಮೌಲ್ಯಮಾಪನಗಳ ಆಧಾರದಲ್ಲಿ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುವ ಬಗ್ಗೆ ಹಾಗೂ ಅದರಲ್ಲಿ ಅರ್ಹತೆ ಹೊಂದಿರದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Related posts