ಟು ಮೈ ಗ್ರೇಟ್ ಫ್ರೆಂಡ್ ಪ್ರಧಾನಿ ನರೇಂದ್ರ ಮೋದಿ, ಥ್ಯಾಂಕ್ಯೂ ಫಾರ್ ದಿಸ್ ವಂಡರ್ ಫುಲ್ ವಿಸಿಟ್

ಅಹಮದಾಬಾದ್: ವರ್ಷಗಳ ಹಿಂದೆ ಬರಾಕ್ ಒಬಾಮ. ಇದೀಗ ಡೊನಾಲ್ಡ್ ಟ್ರಾಂಪ್. ಅಂದು ಒಬಾಮಾ ಜೊತೆ ಯಾವ ರೀತಿಯ ಸ್ನೇಹೀ ಕಸರತ್ತು ನಡೆಸಿದರೋ ಅದೇ ರೀತಿಯ ಮೋದಿ ನಡೆ ಇದೀಗ ಅಮೆರಿಕಾದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೂ ಕಂಡು ಬರುತ್ತಿದೆ.

ಟ್ರಾಂಪ್ ಕೂಡಾ ಮೋದಿ ಅವರ ಸ್ನೇಹವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.  ಸೋಮವಾರ ಭಾರತಕ್ಕೆ ಆಗಮಿಸಿದ್ದ ಟ್ರಂಪ್ ದಂಪತಿ ಸಬರ್ ಮತಿ ಆಶ್ರಮಕ್ಕೆ ಭೇಟಿ ನೀಡಿದರು. ಪ್ರಧಾನಿ ಮೋದಿ ಕೂಡಾ ಅವರ ಜೊತೆಗಿದ್ದರು. ಸಬರ್ ಮತಿ ಆಶ್ರಮದಲ್ಲಿ ಟ್ರಂಪ್ ದಂಪತಿಗೆ ಮೋದಿಯೇ ಆಶ್ರಮ, ಚರಕ, ಗಾಂಧಿ ಕುರಿತು ವಿವರಣೆ ನೀಡಿದರು.

ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಟ್ರಂಪ್ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಸಂದೇಶವನ್ನು ದಾಖಲಿಸಿದರು. “ಟು ಮೈ ಗ್ರೇಟ್ ಫ್ರೆಂಡ್ ಪ್ರಧಾನಿ ನರೇಂದ್ರ ಮೋದಿ, ಥ್ಯಾಂಕ್ಯೂ ಫಾರ್ ದಿಸ್ ವಂಡರ್ ಫುಲ್ ವಿಸಿಟ್ ಎಂದು ಸಂದೇಶ ಬರೆದು ಟ್ರಂಪ್ ಸಹಿ ಮಾಡಿದ್ದಾರೆ.

Related posts