ಕೊರೋನಾಗೆ ಮತ್ತೊಬ್ಬ ವೃದ್ಧ ಬಲಿ; ರಾಜ್ಯದಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಕರುನಾಡಲ್ಲೂ ನಿಲ್ಲದ ಕೊರೋನಾ  ಮರಣ ಮೃದಂಗ.. ರಾಜ್ಯದಲ್ಲಿ ಮತ್ತೊಬ್ಬನಿಗೆ ಕೋವಿಡ್-19 ಸೋಂಕು, ಇನ್ನೊಬ್ಬನ ಬಲಿ..

ಬೆಂಗಳೂರು: ಕೊರೋನಾ ವೈರಾಣುವಿನಿಂದ ಕರುನಾಡು ಕೂಡಾ ತಲ್ಲಣಗೊಂಡಿದೆ. ಕೋವಿಡ್-19 ವೈರಾಣು ತಾನು ಮೊದಲ ಬಳಿ ಪಡೆದಿದ್ದ  ಕಲ್ಬುರ್ಗಿಯಲ್ಲೆ ಇದೀಗ ಮತ್ತೊಬ್ಬರ ಸಾವಿಗೆ ಕಾರಣವಾಗಿದೆ.ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿದ್ದ ಕೊರೋನಾ ವೈರಸ್ ತನ್ನ ಸೋಂಕಿನ ಹಾವಳಿಯನ್ನು ಮುಂದುವರಿಸಿತ್ತೇ ಹೊರತು ಕೆಲ ದಿನಗಳಲ್ಲಿ ಬಳಿ ಪಡೆದ ಉದಾಹರಣೆಗಳಿರಲಿಲ್ಲ. ಆದರೆ ಇದೀಗ ಕಲ್ಬುರ್ಗಿಯಲ್ಲಿ ವೃದ್ಧರೊಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ.. ಮುಂಬೈನಲ್ಲಿ ಸಮುದಾಯ ಹಂತ ತಲುಪಿದ ಕೊರೋನಾ; ಇದೀಗ ಆತಂಕದ ಕ್ಷಣ

ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 65 ವರ್ಷದ ವ್ಯಕ್ತಿ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕಲ್ಬುರ್ಗಿಯ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಗಳವಾರ ಮೃತಪಟ್ಟಿದ್ದಾರೆಂದು ಆರೋಗ್ಯ ಇಲಾಖೆ ಹೇಳಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್’ಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಇದೆ ವೇಳೆ ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ವ್ಯಕ್ತಿಯೊಬ್ಬರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ ಮಂಡ್ಯಾದಲ್ಲಿ ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ.. ಅಸಹಾಯಕರಿಗೆ ನೆರವು; ಕರಾವಳಿ ಕಾಲೇಜು ಸೇನಾನಿಗಳ ಕೈಂಕರ್ಯ

Related posts