ನಿಲ್ಲದ ಕಿಲ್ಲರ್ ಕೊರೋನಾ ಅಟ್ಟಹಾಸ; 4,22,600 ಜನರಿಗೆ ಸೋಂಕು, 19,000 ಮಂದಿ ಬಲಿ

ದೆಹಲಿ: ಚೀನಾದಲ್ಲಿ ಹುಟ್ಟಿ ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ತನ್ನ ರೌದ್ರಾವತಾರವನ್ನು ಮುಂದುವರಿಸಿದೆ.
ಕೋವಿಡ್-19 ವೈರಾಣು ಶರವೇಗದಲ್ಲಿ ಹರಡುತ್ತಿದ್ದು ಜಗತ್ತಿನಾದ್ಯಂತ 4,22,600 ಜನರು ಸೋಂಕು ಪೀಡಿತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೀಗ ಐರೋಪ್ಯ ರಾಷ್ಟ್ರಗಳು ಸ್ಮಾಶಾನದಂತಾಗಿವೆ. ಇರಾನ್, ಪಾಕಿಸ್ತಾನ, ಅಮೆರಿಕಾ ಸಹಿತ ವಿವಿಧ ದೇಶಗಳಲ್ಲೂ ಸಾವಿನ ಸರಣಿ ಮುಂದುವರಿದಿದ್ದು ಈ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 19,000ಕ್ಕೂ ಹೆಚ್ಚಾಗಿದೆ.

ಸ್ಪೇನ್ ಮತ್ತು ಇಟಲಿ ದೇಶಗಳಲ್ಲಂತೂ ಸಾವಿರಾರು ಜನ ಕೊರೋನಾ ಸೋಂಕಿನಿಂದಾಗಿ ಮರಣಕ್ಕೀಡಾಗಿದ್ದಾರೆ. ಈ ಪೈಕಿ ಇಟೆಲಿ ದೇಶವೊಂದರಲ್ಲೇ ಸುಮಾರು 6820 ಮಂದಿ ಬಲಿಯಾಗಿದ್ದಾರೆ. ಸ್ಪೇನ್ ದೇಶದಲ್ಲೂ ಸಾವಿನ ಸಂಖ್ಯೆ 2,800 ದಾಟಿದೆ. ಅದರಲ್ಲೂ ಈ ಮಂಗಳವಾರ ಈ ಎರಡು ದೇಶಗಳ ಪಾಲಿಗೆ ಅತ್ಯಂತ ಕರಾಳ ದಿನವಾಗಿತ್ತು.

ಇಟೆಲಿ ಹಾಗೂ ಸ್ಪೇನ್ ದೇಶಗಳಲ್ಲಿ ಕೋವಿಡ್-19 ವೈರಾಣು ಶರವೇಗದಲ್ಲಿ ಹರಡುತ್ತಿದ್ದು ಮಂಗಳವಾರ ಒಂದೇ ದಿನದಲ್ಲಿ ಸುಮಾರು 1200 ಮಂದಿ ಈ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದಾರೆ.

Related posts