ಯುಗಾದಿ ಖರೀದಿ: ಲಾಕ್ ಡೌನ್ ಕರೆ ಮರೆತ ಜನ

ಬೆಂಗಳೂರು: ಹೊಸ ಸಂವತ್ಸರಕ್ಕೆ ಮುನ್ನುಡಿ ಬರೆಯುವ ಯುಗಾದಿ ಹಬ್ಬವೆಂದರೆ ಹಿಂದೂಗಳ ಪಾಲಿಗೆ ಮಹತ್ವದ ಹಬ್ಬ. ಬೇವಿನ ಕಹಿಯನ್ನೂ ಬೆಲ್ಲದ ಸಿಹಿಯನ್ನೂ ಸಮಾನವಾಗಿ ಸ್ವೀಕರಿಸಿ ಯುಗಾದಿಯನ್ನು ಸಂಭ್ರಮದಿಂದ ಆಚರಿಸಿದರೆ ಪ್ರಕೃತಿ ಮಾತೆ ಒಲಿಯುತ್ತಾಳೆ ಎಂದೂ ದೇವರ ಸಾಕ್ಷಾತ್ಕಾರ ಸಾಧ್ಯ ಎಂದೂ ನಂಬಿರುವವರು ಈ ಮಣ್ಣಿನ ಮಕ್ಕಳು. ಹಾಗಾಗಿಯೇ ಏನೇ ಕೊರೋನಾ ತಲ್ಲಣ ಇದ್ದರೂ ಯುಗಾದಿಗೆ ಅಡ್ಡಿಯಾಗಬಾರದೆಂದು ಜನರು ಯುಗಾದಿಯತ್ತ ಹೆಚ್ಚಿನ ಆದ್ಯತೆ ನೀಡಿರುವುದು ಕಂಡುಬಂತು.

ಕೊರೋನಾದ ತಲ್ಲಣದ ಕಾರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದರೂ ರಾಜ್ಯದ ಹಲವೆಡೆ ಕೊರೋನಾ ನಿಯಂತ್ರಣಕ್ಕಿಂತ ಯುಗಾದಿ ಖರೀದಿಯೇ ಮುಖ್ಯ ಎಂಬ ಸನ್ನಿವೇಶ ಕಂಡುಬಂತು. ಕೋವಿಡ್ 19 ವಿಚಾರದಲ್ಲಿ ಹೈ ಅಲರ್ಟ್ ಘೋಷಿಸಲ್ಪಟ್ಟಿರುವ ಮಂಗಳೂರಿನ ಹಲವೆಡೆ ಬುಧವಾರ ಬೆಳ್ಳಬೆಳಿಗ್ಗೆಯೆ ಜನ ಮಾರುಕಟ್ಟೆಗೆ ಲಗ್ಗೆ ಹಾಕಿದ್ದರು. ಹಬ್ಬಕ್ಕಾಗಿ ಸಾಮಾನು ಖರೀದಿಗಾಗಿ ಜನ ಮುಗಿಬಿದ್ದಿದ್ದರು. ಅಂತರ ಕಾಯ್ದುಕೊಳ್ಳಬೇಕೆಂಬ ಪರಿಜ್ಞಾನವೂ ಇಲ್ಲದಂತೆ ಅಲ್ಲಿ ವರ್ತಿಸುತ್ತಿದ್ದವರೂ ಹಲವರು.

ಕಲಬುರಗಿಯ ಮಾರುಕಟ್ಟೆಯಲ್ಲಿ ಯುಗಾದಿಗಾಗಿ ಖರೀದಿಯ ಭರಾಟೆ ಜೋರಾಗಿತ್ತು. ಪೊಲೀಸರು ತಿಳಿಹೇಳುತ್ತಿದ್ದರೂ ಹಬ್ಬದ ತಯಾರಿಯಲ್ಲೇ ಜನ ತಾಲೀನರಾಗಿದ್ದರು.  ಮೈಸೂರಿನಲ್ಲೂ ಮೋದಿ ಖರೀದಿಗೆ ಜನ ಬೆಲೆ ಕೊಟ್ಟಂತೆ ಕಂಡುಬಂದಿಲ್ಲ. ಯುಗಾದಿ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಭಾರೀ ಜನ ಸೇರಿದ್ದರು. ರಾಮನಗರದ ಮಾರುಕಟ್ಟೆಯಲ್ಲೂ ಇದೆ ರೀತಿಯ ಸನ್ನಿವೇಶ ಕಂಡುಬಂದಿದೆ. ಮಂಡ್ಯಾ ನಗರದ ಮಾರುಕಟ್ಟೆಯಲ್ಲೂ ಬೆಳ್ಳಂಬೆಳಿಗ್ಗೆ ಮಾರಾಟ ಭಾರಾಟೆ ಜೋರಾಗಿ ಸಾಗಿತ್ತು.

ಈ ಮಧ್ಯೆ ಪರಿಸ್ಥಿತಿ ನಿರಂತರಿಸಲು ಪೊಲೀಸರು ಹಲವರಿಗೆ ಬೆಟ್ಟದ ರುಚಿ ತೋರಿಸಿದ ಪ್ರಸಂಗ ಹಲವೆಡೆ ನಡೆದಿದೆ

Related posts