ದೆಹಲಿ: ಕೊರೋನಾ ಅಟ್ಟಹಾಸದ ಕಾರಣಕ್ಕಾಗಿ ಲಾಕ್’ಡೌನ್ ಪರಿಸ್ಥಿತಿಯಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದೀರಾ? ಕೆಲಸವಿಲ್ಲದೇ ದುಡ್ಡಿಗಾಗಿ ಪರದಾಡುತ್ತಿದ್ದೀರಾ? ಲೋನ್ ಕೊಡು ಪ್ರೊವಿಡೆಂಡ್ ಫಂಡ್ ರೆಡಿ ಇದೆ.
ಲಾಕ್’ಡೌನ್ ಪರಿಸ್ಥಿತಿಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕರಿಗೆ ನೆರವಾಗಲು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಮುಂದಾಗಿದೆ. ಆರ್ಥಿಕ ಸಂಕಷ್ಟಕಾಲದಲ್ಲಿ ಮುಂಗಡ ಹಣದ ಆವಶ್ಯಕತೆ ಇರುವವರಿಗೆ ಅಡ್ವಾನ್ಸ್ ನೀಡಲಾಗುತ್ತದೆ ಎಂದು ಇಪಿಎಫ್ ಓ ಸಂಸ್ಥೆಯ ಆಯುಕ್ತರು ಪ್ರಕಟಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿ ಸಂಸ್ಥೆಯೊಂದಕ್ಕೆ ಈ ಕುರಿತು ಮಾಹಿತಿ ನೀಡಿರುವ ಪ್ರಾದೇಶಿಕ ಪಿಎಫ್ ಆಯುಕ್ತ ಅಲೋಕ್ ಯಾದವ್, ಚಂದಾದಾರರಿಗೆ ವಿಶೇಷ ಮುಂಗಡ ಹಣ ನೀಡುವ ಸೌಲಭ್ಯವನ್ನು ಆರಂಭಿಸಿದೆ. ಅದರಂತೆ ತಮ್ಮ ಭವಿಷ್ಯ ನಿಧಿಯಿಂದ ಸ್ವಲ್ಪ ಹಣ ಹಿಂಪಡೆಯಲು ಅವಕಾಶವಿದೆ ಎಂದರು.
ಅನೇಕ ಕಾರ್ಮಿಕರು ವೈದ್ಯಕೀಯ ಹಾಗೂ ಇನ್ನಿತರೇ ಸಮಸ್ಯೆಯ ಸುಳಿಯಲ್ಲಿದ್ದಾರೆ. ಈ ಕಾರಣಕ್ಕಾಗಿ ಚಂದಾದಾರರಿಗೆ ಭವಿಷ್ಯನಿಧಿ ಸಂಸ್ಥೆ ಈ ವ್ಯವಸ್ಥೆ ಕಲ್ಪಿಸಿದೆ ಎಂದು ಅವರು ತಿಳಿಸಿದ್ದಾರೆ.