ಮುಂದಿನ ವರ್ಷದ ನುಡಿ ಜಾತ್ರೆ ಹಾವೇರಿಯಲ್ಲಿ

ಕಲಬುರಗಿ: ಮುಂಬರುವ 86ನೇ ಅಖಿಲ‌ ಭಾರತ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯಲಿದೆ. ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಡಿನ ಗಮನ ಸೆಳೆದಿದೆ. ಇದೇ ಸಮ್ಮೇಳನದಲ್ಲಿ ಮುಂಬರುವ ನುಡಿ ಜಾತ್ರೆ ಬಗ್ಗೆ ಕೈಗೊಂಡ ನಿರ್ಧಾರ ಕುತೂಹಲ ಸೃಷ್ಟಿಸಿದೆ.

ಮುಂಬರುವ ಅಕ್ಷರ ಜಾತ್ರೆಯನ್ನು ಹಾವೇರಿಯಲ್ಲಿ ನಡೆಸಲು ಸಾಹಿತ್ಯ ಪರಿಷತ್ತಿನ ಪ್ರಮುಖರು ನಿರ್ಧರಿಸಿದರು. ಕಲಬುರಗಿ ನಗರಾಭಿವೃದ್ಧಿ ಕಚೇರಿಯಲ್ಲಿ ಕನ್ನಡಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಯಿತು.

ಮುಂಬರುವ 86ನೇ ಅಖಿಲ‌ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು ಹಾವೇರಿ, ಚಿಕ್ಕಬಳ್ಳಾಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದರೆಯ ಪ್ರಮುಖರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಈ ನುಡಿ ಸುಗ್ಗಿಯ ಹೊಣೆಗಾರಿಕೆ ಹಾವೇರಿಗೆ ಒಲಿದಿದೆ.

Related posts