ಟ್ರಂಪ್-ಮೋದಿ ನಡುವಿನ ಮಾತುಕತೆಯ ರಹಸ್ಯ; ಪಾಕ್-ಚೀನಾಕ್ಕೆ ಮುಂದಿದೆ ಮಾರಿಹಬ್ಬ?

ದೆಹಲಿ: ಕೊರೋನಾ ವೈರಾಣು ಹಾವಳಿಗೆ ಇಡೀ ಜಗತ್ತೇ ತತ್ತರಗೊಂಡಿದೆ. ಚೀನಾದಲ್ಲಿ ಸೃಷ್ಟಿಯಾಯಾಗಿದೆ ಎನ್ನಲಾಗುತ್ತಿರುವ ಕೋವಿಡ್-19 ಪ್ರಸ್ತುತ ಅಮೆರಿಕಾಗೂ ಸವಾಲಾಗಿದೆ. ಅಷ್ಟೇ ಅಲ್ಲ, ಅಮೆರಿಕಾದ ಆರ್ಥಿಕ ವ್ಯವಸ್ಥೆಗೆ ಬಲವಾದ ಹೊಡೆತ ನೀಡುವ ವ್ಯವಸ್ಥಿತ ಪಿತೂರಿ ಎಂಬ ಸಂಶಯ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರದ್ದು.

ಏನಿದು 3ನೇ ಮಹಾ ಯುದ್ಧ?

ಇದು ಮೂರನೇ ಮಹಾಯುದ್ಧವನ್ನು ಎದುರಿಸಬೇಕಾದ ಸಂದಿಗ್ಧ ಕಾಲದಲ್ಲಿ ಇಡೀ ಜಗತ್ತಿಗೆ ಕೊರೋನಾ ವಕ್ಕರಿಸಿದ್ದು ಅದರ ವಿರುದ್ಧ ಹೋರಾಡುವುದೇ ಅಮೆರಿಕಾಗೆ ಸವಾಲಾಗಿರೋದು. ಈ ಕಾರಣಕ್ಕಾಗಿಯೇ ಟ್ರಂಪ್ ಅವರು ಭಾರತದ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ನಡುವೆ ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಶನಿವಾರ ನಡೆಸಿರುವ ಮಾತುಕತೆ ಜಾಗತಿಕ ಮಟ್ಟದಲ್ಲಿ ಕುತೂಹಲದ ಕೇಂದ್ರಬಿಂದುವಾಯಿತು. ದೂರವಾಣಿ ಮೂಲಕ ಉಭಯ ರಾಷ್ಟ್ರಗಳ ಪರಿಸ್ಥಿತಿ ಬಗ್ಗೆ ಮಾಹಿತಿ ವಿನಿಮಯ ಮಾಡಿರುವ ಈ ಇಬ್ಬರೂ ನಾಯಕರು, ಮಹಾ ಯುದ್ಧವನ್ನು ಜಂಟಿಯಾಗಿ ಎದುರಿಸುವ ಪ್ರಸ್ತಾಪ ಮಾಡಿದ್ದಾರೆ.

ಪಾಕಿಸ್ತಾನ, ಚೀನಾದಲ್ಲೂ ಸಂಚಲನ

ಟ್ರಂಪ್ ಜೊತೆಗಿನ ಸಮಾಲೋಚನೆ ನಂತರ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೊರೋನಾ ವೈರಸ್ ಕುರಿತಂತೆ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿದೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಅಮೆರಿಕ-ಭಾರತದ ಪಾಲುದಾರಿಕೆಯ ಸಂಪೂರ್ಣ ಶಕ್ತಿ ವಿನಿಯೋಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಒಗಟಿನ ರೀತಿಯಲ್ಲಿ ಮೋದಿಯವರು ಹರಿಯಬಿಟ್ಟಿರುವ ಈ ಕೆಲವು ಸಾಲುಗಳೇ ಇದೀಗ ಜಗತ್ತಿನಲ್ಲಿ ಬಗೆಬಗೆಯ ವಿಶ್ಲೇಷಣೆಗೆ ವಸ್ತು ವಿಷಯವಾಗಿದೆ. ಅದರಲ್ಲೂ ಪಾಕಿಸ್ತಾನ, ಚೀನಾ ಸಹಿತ ಕೆಲವು ದೇಶಗಳಲ್ಲಿ ಇದು ಸಂಚಲನವನ್ನೂ ಮೂಡಿಸಿದೆ.

ಈ ಮಧ್ಯೆ ಭಾರತದೊಂದಿಗೆ ಅಮೆರಿಕಾ ಜಂಟಿಯಾಗಿ ಯುದ್ಧ ಸನ್ನದ್ಧವಾಗಿರುವ  ಸಂಗತಿ ಪಾಕಿಸ್ತಾನ ಹಾಗೂ ಚೀನಾ ದೇಶಗಳಿಗೆ ಅರಗಿಸಿಕೊಳ್ಳಲಾಗದ ಸ್ಥಿತಿಯನ್ನು ತಂದೊಡ್ಡಿದೆ.

ಇದನ್ನೂ ಓದಿ.. ಕೊರೋನಾ ಹಿಂದೆ ಜಿಹಾದಿಯ ವಾಸನೆ..!! ಏನಿದು ಅನುಮಾನ..?

Related posts