ದೆಹಲಿ: ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್ ಸರ್ಕಾರ ಪಠಣ ಪ್ರಕ್ರಿಯೆಗೆ ಮುನ್ನುಡಿ ಬರೆದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ರಾಜ್ಯಸಭೆಗೆ ಆಯ್ಕೆಯಾಗುವುದು ಬಹುತೇಕ ಖಚಿತ. ರಾಜ್ಯಸಭೆ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳನ್ನು ಪ್ರಕಟಿಸಿದ್ದು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕಮಲಾ ಪಕ್ಷ ಟಿಕೆಟ್ ಘೋಷಿಸಿದೆ.
ಕಾಂಗ್ರೆಸ್’ಗೆ ಗುಡ್ ಬೈ ಹೇಳಿ ಕಮಲಾ ಧ್ವಜ ಸ್ವೀಕರಿದ ಕೆಲವೇ ಗಂಟೆಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ಅಭಯಾರ್ಥಿಯಾಗಿ ಘೋಷಿಸಲ್ಪಟ್ಟಿದ್ದಾರೆ. ಮಾರ್ಚ್ 26 ರಂದು ನಡೆಯಲಿರುವ ರಾಜ್ಯಸಭಾ ಚುನಾವಣಾ ಅಭ್ಯರ್ಥಿಗಳ ಬಿಜೆಪಿ ಬಿಡುಗಡೆ ಮಾಡಿದ್ದು ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಧ್ಯಪ್ರದೇಶದಿಂದ ಕಣಕ್ಕಿಳಿಯಲಿದ್ದಾರೆ. ಅಸ್ಸಾಂನಿಂದ ಭುವನೇಶ್ವರ್ ಕಲಿಟಾ, ಬಿಹಾರದಿಂದ ವಿವೇಕ್ ಠಾಕೂರ್, ಅಭಯ್ ಭಾರದ್ವಾಜ್ ಮತ್ತು ಗುಜರಾತ್ ನಿಂದ ರಾಮಿಲಾಬೆನ್ ಬಾರಾ, ಜಾರ್ಖಂಡ್‌ನಿಂದ ದೀಪಕ್ ಪ್ರಕಾಶ್, ಮಣಿಪುರದಿಂದ ಲೀಸೆಬಾ ಮಹಾರಾಜ, ಮಹಾರಾಷ್ಟ್ರದಿಂದ ಉದಯನ್ ರಾಜೇ ಭೋಸ್ಲೆ ಮತ್ತು ರಾಜಸ್ಥಾನದಿಂದ ರಾಜೇಂದ್ರ ಗೆಹ್ಲೋಟ್ ಅವರನ್ನು ಬಿಜೆಪಿ ಕಣಕ್ಕಿಳಿಸಲಿದೆ.