ಬೆಂಗಳೂರು: ಒಂದಂಕಿ ಲಾಟರಿ ಹಗರಣದಲ್ಲಿ ಆರೋಪ ಎದುರಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ ಅಲೋಕ್ಕುಮಾರ್ಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ.
ಲಾಟರಿ ದಂಧೆ ನಡೆಸುತ್ತಿದ್ದ ಪಾರಿರಾಜನ್ನಿಗೆ ಸಹಕರಿಸಿದ ಆರೋಪ ಅಲೋಕ್ ಕುಮಾರ್ ಮೇಲಿತ್ತು. ಪ್ರಕರಣ ಕುರಿತು ಸುಮಾರು 5 ವರ್ಷ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು, ಜ.22ರಂದು ತನಿಖಾ ವರದಿ ಸಲ್ಲಿಸಿದ್ದಾರೆ. ಬೆಂಗಳೂರಿನ ಸಿಬಿಐ ವಿಶೇಷ ಕೋರ್ಟ್ಗೆ 60 ಪುಟಗಳ ಆರೋಪಪಟ್ಟಿ ಸಲ್ಲಿಸಿರುವ ತನಿಖಾಧಿಕಾರಿಗಳು, ಎಡಿಜಿಪಿ ಅಲೋಕ್ಕುಮಾರ್ ಹಾಗೂ ಅಂದಿನ ರಾಜ್ಯ ಲಾಟರಿ ಮತ್ತು ಮದ್ಯ ನಿಷೇಧ ಘಟಕ ಎಸ್ಪಿ ಧರಣೇಂದ್ರ ಅವರು ಲಾಟರಿ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂಬ ಬಗ್ಗೆ ಬೆಳಕು ಚೆಲ್ಲಿದೆ.
ಲಾಟರಿ ಪ್ರಕರಣದಲ್ಲಿ ಆರೋಪಮುಕ್ತರಾದ ಬಗ್ಗೆ ಪ್ರತಿಕ್ರಿಯಿಸಿದ ಅಲೋಕ್ಕುಮಾರ್, ಪೊಲೀಸ್ ಇಲಾಖೆ ಮತ್ತು ಆಡಳಿತದಲ್ಲಿ ಇದ್ದವರ ಒಳಸಂಚಿಗೆ ಬಲಿಪಶು ಆಗಿದ್ದೆ. 5 ವರ್ಷಗಳ ಬಳಿಕ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹೇಳಿದರು.