ಮೋದಿ ಕ್ರಮದಿಂದ ಭ್ರಷ್ಟಾಚಾರಕ್ಕೆ ಅಂಕುಶ ; ಡಿವಿಎಸ್

ಬೆಂಗಳೂರು: ದೇಶದಲ್ಲಿ ಭ್ರಷ್ಟಾಚಾರ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಮೂಲ ಕಾರಣವೇ  ನೋಟು ಅಮಾನ್ಯದ ನಿರ್ಧಾರ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿಸದಾನಂದ ಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಅವರು ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು ಸಮಥಿಸಿಕೊಂಡರು. ನೋಟು ಅಮಾನ್ಯದ ನಿರ್ಮಾಣದ ಬಳಿಕ ದೇಶದಲ್ಲಿ ಭ್ರಷ್ಟಾಚಾರ ತಗ್ಗಿದ್ದು ಆರ್ಥಿಕ ವ್ಯವಸ್ಯೆಗೆ  ಹೊಸ ಆಯಾಮ ದೊರೆತಿದೆ. ಅಷ್ಟೇ ಅಲ್ಲ ಭಾರತ ಈಗ ಜಗತ್ತಿನಲ್ಲೇ ಐದನೇ ಆರ್ತಿಕ ಶಶಕ್ತ ರಾಷ್ಟ್ರವಾಗಿದೆ ಎಂದರು.

ದೇಶದಲ್ಲಿ ಎದುರಾಗಿರುವ ಬಿಕ್ಕಟ್ಟುಗಳಿಂದ ಜಿಡಿಪಿ ಕುಸಿತ ಕಂಡಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಸುಧಾರಣೆಯಾಗಲಿದೆ ಎಂದು ಸದಾನಂದ ಗೌಡ ಆಶಾವಾದ ವ್ಯಕ್ತಪಡಿಸಿದರು.

Related posts