ಭೀಕರ ವಿಷಾನಿಲ ದುರಂತ; 5 ಸಾವಿರಕ್ಕೂ ಹೆಚ್ಚು ಜನ ಅಸ್ವಸ್ಥ

ದೇಶ ಒಂದೆಡೆ ಕೊರೋನಾ ಅವಾಂತರದಿಂದ ನಲುಗಿದ್ದಾರೆ ಅತ್ತ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಬಳಿ ಹಿಂದೆಂದೂ ಕಂಡರಿಯದ ಭೀಕರ ದುಘಟನೆ ನಡೆದಿದೆ.

ಬೆಳ್ಳಂಬೆಳಗ್ಗೆ ಆ ಗ್ರಾಮದಲ್ಲಿ ಮಾರ್ಗದುದ್ದಕ್ಕೂ ಹೆಣಗಳಂತೆ ಬಿದ್ದಿದ್ದ ಜನ.. ರಸ್ತೆಯಲ್ಲಿ ಒಂದೆಡೆ ವಾಹನಗಳು, ಇನ್ನೊಂದೆಡೆ ಜನ.. ಏನೋ ಅಪಘಾತ ಸಂಭವಿದ ರೀತಿಯಲ್ಲಿ ಆ ಸನ್ನಿವೇಶ ಕಂಡುಬರುತ್ತಿತ್ತಾದರೂ ಆ ಘಟನೆ ಮಾತ್ರ ವಿಷಾನಿಲದ ಅವಾಂತರ. ಮಕ್ಕಳು, ವೃದ್ಧರಾದಿಯಾಗಿ ಸಾವಿರಾರು ಮಂದಿ ಇಂದು ಬೆಳ್ಳಂಬೆಳಿಗೀಯೇ ಸಾವಿನ ಮನೆಯ ಕಾದ ತಟ್ಟಿದ್ದರು.

ಪ್ಲಾಸ್ಟಿಕ್ ತಾಯಾರಿಕಾ ಕೆಮಿಕಲ್ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆಯಾಗಿ ಈ ಘನಘೋರ ದುರಂತ ಸಂಭವಿಸಿದೆ. ವಿಶಾಖಪಟ್ಟಣಂನ ಗೋಪಾಲಪಟ್ಟಣದ, ನಾಯ್ಡು ತೋಟಾ ಸಮೀಪದ ಆರ್.ಆರ್.ವೆಂಕಟಪುರಂನಲ್ಲಿರುವ ಎಲ್.ಜಿ.ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ನಸುಕಿನ ಜಾವ 2.30ರ ಸುಮಾರಿಗೆ ಅನಿಲ ಸೋರಿಕೆಯಾಗಿರಬಹುದೆಂದು ಹೇಳಲಾಗುತ್ತಿದೆ. ಆದರೆ ಅಷ್ಟರಲ್ಲೇ ಆ ಊರ ಜನತೆ ನಿದ್ದೆಗೆ ಜಾರಿರುವುದರಿಂದಾಗಿ ಈ ವಿಷಾನಿಲ ದುರಂತದ ಬಗ್ಗೆ ಯಾರಿಗೂ ಗೊತ್ತಾಗಲಿಲ್ಲ. ರಾತ್ರಿ ಸರಿದು ಬೆಳಕಾಗುವಷ್ಟರಲ್ಲಿ ಸುತ್ತಮುತ್ತ ಹಳ್ಳಿಗಳಲ್ಲಿ ಮಾರಣಹೋಮವೇ ನಡೆದಿದೆ. ಮನೆಗಳಲ್ಲಿ ಮಲಗಿದ್ದವರೂ ಚಿರ ನಿದ್ರೆಗೆ ಜಾರಿದ್ದಾರೆ.

ಬೆಳಗ್ಗೆ ವಾಕಿಂಗ್ ಮತ್ತು ಇತರೆ ಕಾರ್ಯಗಳಿಗೆ ತೆರಳಿದ ಮತ್ತಷ್ಟು ವಿಷಾನಿಲವನ್ನು ಉಸಿರಾಡಿ ಅಸ್ವಸ್ಥರಾಗಿದ್ದಾರೆ. ವಿಷಯ ತಿಳಿಯದೆ ಮಾರ್ಕೆಟ್ ಬಳಿ ತೆರಳಿದ್ದ ಜನ ಇದ್ದಕ್ಕಿದ್ದಂತೆ ಕುಸಿದು ಬೀಳುತ್ತಿದ್ದ ದೃಶ್ಯಗಳೂ ಬೆಚ್ಚಿ ಬೀಳುವಂತಿತ್ತು. ಸ್ಥಳೀಯ ಅಧಿಕಾರಿಗಳು ಹೇಳುವಂತೆ ಸುತ್ತಮುತ್ತಲ 5 ಹಳ್ಳಿಗಳಿಗೆ ಈ ವಿಷಾನಿಲ ವ್ಯಾಪಿಸಿದ್ದು, 5 ಸಾವಿರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಈ ಪೈಕಿ 300ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ. ಬೆಳಿಗ್ಗೆ ಹೊತ್ತಿಗೆ 9 ಮಂದಿ ಸಾವಿಗೀಡಾಗಿದ್ದಾರೆಂದು ಪ್ರಾಥಮಿಕ ವರದಿ ಹೇಳಿತ್ತಾದರೂ ನಿಖರ ಸಂಖ್ಯೆ ಇನ್ನಷ್ಟೇ ಗೊತ್ತಾಗಬೇಕಿದೆ. ಘಟನಾ ಸ್ಥಳದ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕುರ್ಫ್ಯೂ ಜಾರಿಗೊಳಿಸಲಾಗಿದ್ದು ರಕ್ಷಣಾ ಕಾರ್ಯ ಸಾಗಿದೆ.

ವಿಷಾನಿಲ ಸೋರಿಕೆಯಾಗಿರುವ ಎಲ್.ಜಿ.ಪಾಲಿಮರ್ಸ್ ಇಂಡಸ್ಟ್ರಿ ಸಂಸ್ಥೆ 1961ರಲ್ಲಿ ನಿರ್ಮಾಣವಾಗಿತ್ತು. ಹಿಂದೂಸ್ತಾನ್ ಪಾಲಿಮರ್ಸ್ ಎಂಬ ಹೆಸರಿನ ಈ ಕಂಪೆನಿ 1978ರಲ್ಲಿ ಮೆಕ್ ಡೊವೆಲ್ & ಕಂಪನಿ ಲಿಮಿಟೆಡ್ ಆಫ್ ಯುಬಿ ಸಮೂಹದೊಂದಿಗೆ ವಿಲೀನಗೊಂಡಿತ್ತು.

ಇದನ್ನೂ ಓದಿ.. ಲಾಕ್’ಡೌನ್ ವೇಳೆ ಗಲಭೆ ನಿಯಂತ್ರಿಸಿದ ರಾಷ್ಟ್ರಗೀತೆ; ದಿಢೀರನೆ ಹೀರೋ ಆದ ಪೊಲೀಸ್ ಇನ್ಸ್‌ಪೆಕ್ಟರ್ 

 

Related posts