ಎರಡನೇ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಮೇರಿ ಕೋಮ್ ಸಜ್ಜು

ದೆಹಲಿ: ಭಾರತದ ಹೆಮ್ಮೆಯ ಬಾಕ್ಸರ್ ಮೇರಿ ಕೋಮ್ ಅವರು ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಎರಡನೇ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಜ್ಜಾಗಿದ್ದಾರೆ.

ಜೋರ್ಡಾನ್‌ನ ಅಮ್ಮನ್‌ನಲ್ಲಿ ಶನಿವಾರ ನಡೆದ ಏಷ್ಯನ್ -ಓಷಿಯಾನಿಯನ್ ಒಲಿಂಪಿಕ್ ಕ್ವಾಲಿಫೈಯರ್ಸ್‌ ಪಣ್ಯದಲ್ಲಿ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ನ್ಯೂಜಿಲೆಂಡ್‌ನ ಟ್ಯಾಸ್ಮಿನ್ ಬೆನ್ನಿ ವಿರುದ್ಧ 5-0 ಅಂತರದ ಗೆಲುವು ಸಾಧಿಸಿದರು. ಈ ಮೂಲಕ ಅವರು ಈ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ

ಇದಕ್ಕೂ ಮೊದಲು ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಅಮಿತ್ ಪಂಗಲ್ ಕೂಡ ಮಂಗೋಲಿಯ ಎನ್‌ಖ್ಮನಾಡಾಕ್ ಖಾರ್ಖು ವಿರುದ್ಧ 3-2 ಗೋಲುಗಳಿಂದ ಜಯ ದಾಖಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಕೋಮ್ ಮತ್ತು ಪಂಗಲ್ ಇಬ್ಬರೂ ತಮ್ಮ ಟೋಕಿಯೊ ಒಲಿಂಪಿಕ್ ಪ್ರವೇಶದ ಹೊಸ್ತಿಲಲ್ಲಿದ್ದು ಇನ್ನು ಒಂದು ಹೆಜ್ಜೆಯಷ್ಟೇ ಬಾಕಿ ಇದೆ.

Related posts