ನಟ, ನಿರೂಪಕ ಅಕುಲ್ ಬಾಲಾಜಿ ಮೇಲೇಕೆ ಪೊಲೀಸರಿಗೆ ಸಿಟ್ಟು?

ಬೆಂಗಳೂರು: ಜನಪ್ರಿಯ ಕಿರುತೆರೆ ನಿರೂಪಕ, ನಟ ಅಕುಲ್ ಬಾಲಾಜಿಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಅವರನ್ನು ಬಂಧಿಸಲು ಪೊಲೀಸರು ಕ್ರಮ ಅನುಸರಿಸುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಲಾಕ್‌ಡೌನ್ ನಡುವೆಯೇ ತನ್ನ ರೆಸಾರ್ಟ್‌ನಲ್ಲಿ ಮದುವೆ ಕಾರ್ಯಕ್ರಮವೊಂದಕ್ಕೆ ಸಿದ್ಧತೆ ನಡೆಸುತ್ತಿದ್ದ ಆರೋಪ ಅಕುಲ್ ಬಾಲಾಜಿ ವಿರುದ್ಧ ಕೇಳಿಬಂದಿದ್ದು ಈ ಪ್ರಕರಣ ಸಂಬಂಧ ಬೆಂಗಳೂರು  ಗ್ರಾಮಾಂತರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಎಲ್ಲೆಡೆ ಕೊರೋನ ಆತಂಕ ಕಾದಿದ್ದು ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಿದ್ದರೂ ಅಕುಲ್ ಬಾಲಾಜಿಗೆ ಸೇರಿದ ರೆಸಾರ್ಟ್‌ನಲ್ಲಿ ಮದುವೆ ಕಾರ್ಯಕ್ರಮ ವ್ಯವಸ್ಥೆಗೊಳಿಸಿದ ಕಾರಣಕ್ಕಾಗಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ.. ‘ಅಮ್ಮಾ ಅಮ್ಮಾ ಓ ಎನ್ನಮ್ಮಾ’.. ಮೋದಿ ಮತ್ತು ತಾಯಿ ಕುರಿತ ಹಾಡಿಗೆ ಸಕತ್ ಲೈಕ್

 

ದೊಡ್ಡಬಳ್ಳಾಪುರ ಸಮೀಪ ಲಘುಮೇನಹಳ್ಳಿ ಬಳಿ ಅಕುಲ್ ಒಡೆತನದ  ಸನ್‌ಶೈನ್ ರೆಸಾರ್ಟ್‌ ನಲ್ಲಿ ಎಪ್ರಿಲ್ 18ರಂದು ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು ಎನ್ನಲಾಗಿದೆ.  ಬೆಂಗಳೂರಿನಿಂದ 20ಕ್ಕೂ ಅಧಿಕ ಮಂದಿ ರೆಸಾರ್ಟ್‌ಗೆ ಬಂದು ಯಾವುದೇ ಅನುಮತಿ ಇಲ್ಲದೆ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು. ಈ ಮೂಲಕ ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ‌ ಎಂದು ಪೊಲೀಸರೇ ಸಿಡಿಮಿಡಿಗೊಂಡಿದ್ದಾರೆ.

ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದೇ ತಡ ಕಾನೂನು ಪ್ರಕ್ರಿಯೆಗೆ ಮುನ್ನುಡಿ ಬರೆದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು  ಅಕುಲ್ ಬಾಲಾಜಿ ಮತ್ತು ಶ್ರೀನಿವಾಸ್‌ಮಣಿಯಂ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅನ್ವಯ ಐಪಿಸಿ ಸೆಕ್ಷನ್ 188, 269ರ ಅಡಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ.. ಚೀನಾ ವಿರುದ್ಧ ತೊಡೆ ತಟ್ಟಿದ ಭಾರತ, ಅಮೇರಿಕ; ಡ್ರ್ಯಾಗನ್ ರಾಷ್ಟ್ರ ಕಂಗಾಲು

 

Related posts