ಲಾಕ್ ಡೌನ್ ಹಿನ್ನೆಲೆ; ಪ್ರತೀ ಕುಟುಂಬಕ್ಕೆ ತಲಾ 1,000 ರೂ ನೆರವು

ಬೆಂಗಳೂರು: ಕರೋನಾ ವರಸ್ ತಲ್ಲಣ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯ ಲಾಕ್ ಡೌನ್’ಗೆ ಸರ್ಕಾರ ಆದೇಶಿಸಿದೆ. ಈ ಕಾರಣದಿಂದಾಗಿ ಬಡ ಕಾರ್ಮಿಕರು ಕಂಗಾಲಾಗಿದ್ದಾರೆ. ತುತ್ತು ಅನ್ನಕ್ಕೂ ಬಡಪಾಯಿ ಮಂದಿ ಪರದಾಡುವಂತಾಗಿದೆ.

ಬೆಂಗಳೂರು ಸಹಿತ ರಾಜ್ಯದ ಎಲ್ಲೆಡೆ ಒಪ್ಪೊತ್ತಿನ ಊಟಕ್ಕಾಗಿ ಆಯಾ ದಿನದ ದುಡಿಮೆಯನ್ನೇ ನಂಬಿರುವ ಕುಟುಂಬಗಳು ಕೋಟಿಗೂ ಹೆಚ್ಚಿವೆ. ಅಂತಹಾ ಬಡ ಕುಟುಂಬಗಳು ತಮಗೆ ಕೊಣಾ ಕಾಯಿಲೆ ಇಲ್ಲದಿದ್ದರೂ ಇದರಿಂದ ಆಗಿರುವ ಪರಿಣಾಮ ಹಾಗೂ ಕರಾಳ ಪರಿಸ್ಥಿತಿಯಿಂದ ನಲುಗುವಂತಾಗಿದೆ.

ನೆರವಿಗೆ ಧಾವಿಸಿದ ಸಿಎಂ

ಬಡಪಾಯಿ ಮಂದಿಯ ಈ ಪರಿಸ್ಥಿತಿಯನ್ನು ಮನಗಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಮ್ಮಲ ಮರುಗಿದ್ದಾರೆ. ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದ ಪರಿಣಾಮ ಸಂಕಷ್ಟಕ್ಕೀಡಾಗಿರುವ ಬಡವರ ನೆರವಿಗೆ ಧಾವಿಸಿರುವ ಸಿಎಂ, ವಿಶೇಷ ಪ್ಯಾಕೇಜ್ ಪ್ರಕಟಿಸಿದ್ದಾರೆ.

ವಿಧಾನಸೌಧದಲ್ಲಿ ಈ ಪ್ಯಾಕೇಜ್ ಪ್ರಕಟಿಸಿದ ಯಡಿಯೂರಪ್ಪ, ರಾಜ್ಯದ 21 ಲಕ್ಷ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ತಲಾ ಒಂದು ಸಾವಿರ ಪರಿಹಾರ ಧನ ನೀಡಲಾಗುವುದು ಎಂದರು. ಬಡವರ ಬಂಧು ಯೋಜನೆಯ ಸಾಲಮನ್ನಾ ಮಾಡುವುದಾಗಿಯೂ ಪ್ರಕಟಿಸಿದ ಅವರು, ಎರಡು ತಿಂಗಳ ಪಡಿತರ ಮುಂಗಡ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದೂ ತಿಳಿಸಿದರು.

Related posts