ಟ್ರಂಪ್ ಗೆ  ಅದ್ಧೂರಿ ಸ್ವಾಗತ; ಭಾರತ ಜೊತೆ 3 ಶತಕೋಟಿ ಡಾಲರ್ ರಕ್ಷಣಾ ಒಪ್ಪಂದ

ಅಹಮದಾಬಾದ್ : ಭಾರತ ಪ್ರವಾಸಕ್ಕಾಗಿ ಆಗಮಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ಈ ದೇಶದಲ್ಲಿನ ಗೌರವ ಸತ್ಕಾರಗಳನ್ನು ಕಂಡ ಟ್ರಾಂಪ್ ದಂಪತಿ ಪುಳಕಿತರಾದರು.

ಇದೆ ವೇಳೆ ಜಾಗತಿಕ ಕುತೂಹಲದ ಕೇಂದ್ರ ಬಿಂದುವಾಗಿರುವ ವಿಶ್ವದ  ಅತಿದೊಡ್ಡ ಕ್ರಿಕೆಟ್ ಮೈದಾನ ಮೊಟೆರಾ ಕ್ರೀಡಾಂಗಣ ಸೇವೆಗೆ ಸಮರ್ಪಣೆಯಾಯಿತು. ಅದೇ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾರೀ ಜನಸ್ತೋಮ ಕಂಡುಬಂತು. ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎರಡೂ ದೇಶಗಳು ಜಗತ್ತಿನ ಶಾಂತಿ,ಪ್ರಗತಿ ಮತ್ತು ಸುರಕ್ಷತೆಗೂ ಪರಿಣಾಮಕಾರಿ ಕೊಡುಗೆ ನೀಡಬಲ್ಲವು ಎಂದು ಹೇಳಿದರು.

ಇದೆ ವೇಳೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ಲಾಮಿಕ್ ಉಗ್ರವಾದದ ವಿರುದ್ಧ ಉಭಯ ದೇಶಗಳು ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದರು. ಭಾರತ ಮತ್ತು ಅಮೆರಿಕವನ್ನು ಕೆಣಕಿದವರಿಗೆ ತಕ್ಕ ಶಾಸ್ತಿಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.

ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಹಕಾರ ಮುಂದುವರಿಯಲಿದೆ ಎಂದ ಟ್ರಾಂಪ್, ಭಾರತ ಮತ್ತು ಅಮೆರಿಕ ನಡುವೆ ಭಾರತ ಸೇನಾಪಡೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಮಾರಾಟ ಮಾಡುವ 3 ಶತಕೋಟಿ ಅಮೆರಿಕನ್ ಡಾಲರ್ ವಹಿವಾಟಿನ ಒಪ್ಪಂದ ನಡೆಯಲಿದೆ ಎಂದು ಟ್ರಂಪ್  ಘೋಷಿಸಿದರು.

Related posts